History of Ancient Greece 2026: ಪ್ರಾಚೀನ ಗ್ರೀಸ್ ನಲ್ಲಿ ಇತಿಹಾಸ ಲೇಖನ ಕಲೆಯ ಬೆಳವಣಿಗೆಯನ್ನು ಕುರಿತು ಬರೆಯಿರಿ.

History of Ancient Greece 2026: ಪ್ರಾಚೀನ ಗ್ರೀಸ್ ನಲ್ಲಿ ಇತಿಹಾಸ ಲೇಖನ ಕಲೆಯ ಬೆಳವಣಿಗೆಯನ್ನು ಕುರಿತು ಬರೆಯಿರಿ.

ಪೀಠಿಕೆ :

ವಾಸ್ತವಿಕ ಇತಿಹಾಸವನ್ನು ರಚಿಸುವ ಕಲೆಯನ್ನು ಕಲಿತವರಲ್ಲಿ ಗ್ರೀಕರು ಮೊದಲಿಗರಾಗಿದ್ದಾರೆ ಗ್ರೀಕರ ಉದ್ದೇಶಗಳು ಕರ್ತವ್ಯಗಳು ಮತ್ತು ಕಾನೂನಿನ ಬಗ್ಗೆ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದರು ತಂತ್ರಜ್ಞಾನ ಮತ್ತು ವಿಜ್ಞಾನ ಗಳಿಗೆ ಜನ್ಮ ಕೊಟ್ಟಂತೆ ಇತಿಹಾಸಕ್ಕೂ ಗ್ರೀಕರೇ ಜನ್ಮವಿತರು. ಹಾಗಾಗಿ ಇತಿಹಾಸ ಶಾಸ್ತ್ರವು ಗ್ರೀಕ್ನಲ್ಲೇ ಬೆಳವಣಿಗೆ ಹೊಂದುವುದರ ಮೂಲಕ ಜಗತ್ತಿನಲ್ಲಿ ತನ್ನದೇ ಆದಂತ ಸ್ಥಾನಮಾನವನ್ನು ಪಡೆದುಕೊಂಡಿದ

ಪ್ರಾಚೀನ ಗ್ರೀಸ್ ನಲ್ಲಿ ಇತಿಹಾಸ ಲೇಖನ ಕಲೆಯ ಬೆಳವಣಿಗೆ

  • ಈಜಿಪ್ಟ್ ಮತ್ತು ಮೆಸಪೋಟಮಿಯ ನಾಗರಿಕತೆಯಲ್ಲಿ ಕಾಲಾನುಕ್ರಮದ ವಾರ್ಷಿಕ ಘಟನೆಗಳನ್ನು ಕ್ರೂಢೀಕರಿಸುವ ಪ್ರಯತ್ನ ವಾಯಿತು ಆದರೆ ಇತಿಹಾಸ ಶಾಸ್ತ್ರದ ಅಥವಾ ಇತಿಹಾಸ ಲೇಖನ ಕಲೆಗೆ ಒಂದು ವಿಶಿಷ್ಟ ಸ್ಥಾನಮಾನ ಸಿಕ್ಕಿದ್ದು ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಇತಿಹಾಸ ಪಿತಾಮಹನಾದ ಹೆರೋಡೊಟಸ್ ನಿಂದ.
  • ಪ್ರಾಚೀನ ಗ್ರೀಕ್ ದೇಶದಲ್ಲಿ ಇತಿಹಾಸ ಶಾಸ್ತ್ರ ಎಂಬ ಪದವನ್ನು ಭವಿಷ್ಯದ ಪೀಳಿಗೆಗೆ ಘಟನೆಗಳ ಬಗ್ಗೆ ತಿಳಿಸುವ ಉದ್ದೇಶಕ್ಕಾಗಿ ನಿರೂಪಣಾ ಸ್ವರೂಪದಲ್ಲಿ ದಾಖಲಿಸುವ ಲಿಖಿತ ಇತಿಹಾಸವನ್ನು ರಚಿಸಲು ಪ್ರಾರಂಭಿಸಲಾಯಿತು.
  • ಇತಿಹಾಸ ಲೇಖನೆಗಳ ರಚನೆಯ ಸಾಧ್ಯತೆಗಳು ಗ್ರೀಕರ ಬೌದ್ಧಿಕ ಸಂಪ್ರದಾಯದಲ್ಲಿ ಅಂತರ್ಗತವಾಗಿದ್ದು ಇತಿಹಾಸ ಬೆಳವಣಿಗೆಗೆ ಭದ್ರ ತಳಪಾಯ ಹಾಕಿದರು
  • ಗ್ರೀಕ್ ಇತಿಹಾಸದ ಬೆಳವಣಿಗೆಗೆ ಕವಿತೆಮತ್ತು ವಾಕ್ ಪಟುತ್ವ ಪ್ರೇರಕಗಳಾಗಿದ್ದು ಅದು ಅಲೋನಿಯಾದಲ್ಲಿ ಜನ್ಮ ತಾಳಿತು ಎಂದು ಶ್ರೇಷ್ಠ ಇತಿಹಾಸಕಾರನಾದ ಜೆ ಥಾವರ್ ಸನ್ ಅಭಿಪ್ರಾಯಪಟ್ಟಿದ್ದಾರೆ.
  • ಅಲೋನಿಯ ಎಂಬ ಸ್ಥಳ ಪ್ರಪಂಚದ ಇತಿಹಾಸದ ತವರೂರು ಎಂದು ಕರೆಯಲ್ಪಟ್ಟಿದೆ.
  • ಗ್ರೀಕರು ನಿಸರ್ಗದೊಂದಿಗೆ ಸರಳ ಜೀವನವನ್ನು ನಡೆಸುತ್ತಿದ್ದರು ಅವರ ಜೀವನ ಚೈತನ್ಯ ರೂಪಗಳೊಂದಿಗೆ ನಡೆಯುತ್ತಿದೆ ಎಂದು ಭಾವಿಸಿದ್ದರು.
  • ಗ್ರೀಕರ ಸಮಾಜದ ಜೀವನವು ಧರ್ಮದಿಂದ ನಿರ್ಬಂಧಿಸಲ್ಪಟ್ಟಿತ್ತು
  • ಗ್ರೀಕರು ಮಾನವರ ಇತಿಹಾಸಗಳು ದೇವರ ಹತೋಟಿಯಲ್ಲಿದೆ ಎಂದು ಅವರು ನಂಬಿದ್ದರು ವ್ಯಕ್ತಿ ಸಂಬಂಧವಿಲ್ಲದ ವಿಧಿಯು ದೇವತೆಗಳು ಮತ್ತು ಮಾನವರ ಮೇಲೆ ಪ್ರಭಾವ ಬೀರುತ್ತಿತ್ತು ಎಂದು ನಂಬಿದ್ದರು .
  • ಬುಡಕಟ್ಟಿನ ಜನರು ದೈವಾಂಶ ಸಂಭೂತರಾಗಿದ್ದರು ಎಂದು ಗ್ರೀಕರು ನಂಬಿದ್ದರು ಇದರಿಂದಾಗಿ ಇತಿಹಾಸದಲ್ಲಿ ವ್ಯಕ್ತಿಗಳಿಗೆ ಮಾನ್ಯತೆಯ ನೀಡಿದ ಬಗ್ಗೆ ವಿವರಿಸುತ್ತದೆ.
  • ಅಂತರಂಗದ ಆಧ್ಯಾತ್ಮಿಕ ತಪ್ಪು ಪಾಪಗಳ ಅರಿವು ಗ್ರೀಕರಿಗಿರಲಿಲ್ಲ ಜೀವನ ರೀತಿಯ ಬಗ್ಗೆ ಯಾವ ಧರ್ಮಗಳ ಬಲೆಗೆ ಸಿಲುಕದೆ ಸ್ವತಂತ್ರರಾಗಿ ಇತಿಹಾಸ ಕಲೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು
  • ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಗ್ರೀಕರು ಆಸಕ್ತಿ ಉಳ್ಳವರಾಗಿದ್ದರು ಇದರಿಂದಾಗಿ ಇತಿಹಾಸ ಶಾಸ್ತ್ರ ಬೆಳೆದು ಬಂತು
  • ನಿಸರ್ಗ ಇತಿಹಾಸ ಮತ್ತು ತಂತ್ರಜ್ಞಾನಗಳ ಆಳವಾದ ಅಧ್ಯಯನವು ಗ್ರೀಕರಿಗೆ ಇಷ್ಟವಾಗಿತ್ತು.
  • ಇತಿಹಾಸಕ್ಕೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದರು ಎಂಬುದಕ್ಕೆ ನಮಗೆ ಅವರು ನಾಗರಿಕತೆ ಮತ್ತು ಸಂಸ್ಕೃತಿಯಿಂದ ತಿಳಿದು ಬರುತ್ತದೆ.
  • ಗ್ರೀಕರಿಗೆ ಯುಗಗಳ ಕಲ್ಪನೆ ಬಗ್ಗೆ ತಿಳಿದಿತ್ತು ಸ್ವರ್ಣ ಯುಗ ರಜಿತ ಯುಗ ಕಂಚಿನ ಯುಗ ವೀರ ಯುಗ ಮತ್ತು ಕಬ್ಬಿಣ ಯುಗ ಎಂದು ಮಾನವ ಕುಲದ ಐದು ಯುಗಗಳನ್ನು ಗ್ರೀಕರು ಹೆಸರಿಸಿದ್ದಾರೆ
  • ಕ್ರಿಸ್ತಪೂರ್ವ ಆರನೇ ಶತಮಾನವು ಗ್ರೀಕ್ ಇತಿಹಾಸದಲ್ಲಿ ಬುದ್ದಿಶಕ್ತಿಯ ಒಂದು ಪರಿವರ್ತನೆಯ ಕಾಲವಾಗಿತ್ತು
  • ಗ್ರೀಕರು ಮೊದಲು ಗದ್ಯಕಾರರಾಗಿ ಕಾಣಿಸಿಕೊಂಡರು ನಂತರ ತತ್ವ ಜ್ಞಾನದ ಪದ್ಧತಿಯು ಬೆಳಕೊಂಡು ಬಂದು ಭೂಗೋಳ ಶಾಸ್ತ್ರ ಮತ್ತು ಕಾಲಗಳ ಶಾಸ್ತ್ರವು ಬರಲಾರಂಬಿಸಿದವು
  • ಗ್ರೀಕ್ ನಲ್ಲಿ ಇತಿಹಾಸ ಸಾಹಿತ್ಯವು ವೃತ್ತಾಂತ ರೂಪಕ ಇತಿಹಾಸ ಲಾವಣಿ ಮತ್ತು ಗೀತೆಗಳಲ್ಲಿ ವ್ಯಕ್ತವಾಗಿದೆ
  • ಗ್ರೀಕರು ಇತಿಹಾಸಕ್ಕೆ ಸ್ಥಳೀಯ ಪುರಾಣ ಕಥೆಗಳೇ ಆಧಾರವಾಗಿದ್ದವು
  • ಗ್ರೀಕರು ಸತ್ಯ ಹೇಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಗ್ರೀಕ್ ಇತಿಹಾಸಕ್ಕೆ ಹೆಚ್ಚಿನ ಮಹತ್ವ ತಂದು ಕೊಟ್ಟಿತು
  • ಗ್ರೀಕರು ಸಮಕಾಲಿನ ಎಲ್ಲಾ ವ್ಯಕ್ತಿಗಳು ಮತ್ತು ಎಲ್ಲಾ ವಿಷಯಗಳ ಬಗ್ಗೆ ಇತಿಹಾಸ ರಚಿಸಿದರು
  • ಗ್ರೀಕರ ಇತಿಹಾಸವು ಮಾನವರು ವಸ್ತುಗಳು ಪ್ರಸಿದ್ದ ರಾಷ್ಟ್ರಗಳು ಪ್ರಪಂಚದ ವೃತ್ತಾಂತಗಳು ಸ್ಥಳೀಯ ವೃತ್ತಾಂತಗಳು ರಾಜಕೀಯ ಮುಂತಾದವುಗಳಿಗೆ ಸಂಬಂಧಿಸಿವೆ.

ಹೇರೋಡೊಟಸ್ ಬಗ್ಗೆ ಟಿಪ್ಪಣಿ ಬರೆಯಿರಿ.

ಹೇರೋಡೊಟನ್ ಸಾ.ಶ.ಪೂ 5ನೇ ಶತಮಾನದಲ್ಲಿ ಜೀವಿಸಿದ್ದ ಶ್ರೇಷ್ಠ ಗ್ರೀಕ್ ಇತಿಹಾಸಕಾರನಾಗಿದ್ದನು ಇವನು ಇತಿಹಾಸ ಮತ್ತು ಮಾನವ ಶಾಸ್ತ್ರಕ್ಕೆ ಗಣನೀಯವಾದ ಕೊಡುಗೆಯನ್ನು ಸಲ್ಲಿಸಿದ್ದಾನೆ

  • ಕಾಲ: ಸಾ.ಶ. ಪೂ. 484-424
  • ಸ್ಥಳ :ಗ್ರೀಕ್ ನಗರವಾದ ಹ್ಯಾಲಿಕಾರ್ನಾಸಸ್‌ನಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ
  • ತಂದೆ ತಾಯಿಗಳು : ತಂದೆ: ಲಿಕ್ಸಸ್, ತಾಯಿ: ಡ್ರಯೋಟನ್ಕೃ
  • ತಿ: ದಿ ಹಿಸ್ಟರಿ ಆಫ್ ಪರ್ಶಿಯನ್ ವಾರ್ಸ್ ( ಪರ್ಷಿಯನ್ ಕದನಗಳ ಇತಿಹಾಸ )
  • ಹೇರೋಡೊಟಸ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಸಂಚಾರ ಮಾಡಿದ ಗ್ರೀಕ್ ನಗರ ರಾಜ್ಯಗಳ ಬಗೆಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ ಅವುಗಳನ್ನು 9 ಸಂಪುಟಗಳಲ್ಲಿ ಬರೆದಿದ್ದಾನೆ ದಿ ಹಿಸ್ಟರಿ ಆಫ್ ಪರಶಿಯನ್ ವಾರ್ ಎಂಬ ಕೃತಿಯಲ್ಲಿ ಗ್ರೀಕರು ಮತ್ತು ಪರ್ಷನ್ನರ ನಡುವೆ ನಡೆದ ಕದನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಗಿದೆ
  • ಇದು ಇತಿಹಾಸದ ಆರಂಭಿಕ ಕೃತಿಗಳಲ್ಲಿ ಮೊದಲನೆಯದಾಗಿದೆ ಈತನಿಂದಲೇ ಇತಿಹಾಸದ ಅರ್ಥ ಮತ್ತು ವ್ಯಾಪ್ತಿ ವಿವರಣೆ ಪ್ರಾರಂಭವಾಗಿದ್ದು .

ಇತಿಹಾಸಕ್ಕೆ ನೀಡಿದ ಕೊಡುಗೆ

  • ಹೆರೊಡೋಟಸ್ ಪ್ರಕಾರ ಇತಿಹಾಸ ಎಂದರೆ :- “ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪುರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ”. ಈ ವ್ಯಾಖ್ಯೆಯಲ್ಲಿ ಹೆರೊಡೋಟನ್ನು ಭವಿಷ್ಯದ ತಲೆಮಾರುಗಳು ಮಹಾನ್ ವ್ಯಕ್ತಿಗಳ ಸಾಧನೆ ಹಾಗೂ ಮಹತ್ವಪುರ್ಣ ಘಟನೆಗಳಿಂದ ಕಲಿಯಬಹುದಾದ ಪಾಠಗಳ ಮೇಲೆ ತನ್ನ ವಿಚಾರಗಳನ್ನು ಕೇಂದ್ರೀಕರಿಸಿದ್ದಾನೆ.ಹೆರೊಡೋಟಸ್ನ ಐತಿಹಾಸಿಕ ಮಹತ್ವ ಹೊರತಾಗಿಯೂ, ಅವನ ವೈಯಕ್ತಿಕ ಜೀವನವನ್ನು ಸ್ವಲ್ಪವೇ ತಿಳಿದಿದೆ.
  • ಗ್ರೀಕರು ಮತ್ತು ಪರ್ಷಿಯನ್ ರ ನಡುವಿನ ಯುದ್ಧವು ಹೇರೋಡೊಟಸ್ ನ ಇತಿಹಾಸದ ಕೇಂದ್ರ ವಿಷಯವಾಗಿತ್ತು ಆದರೂ ಅವರ ಗ್ರಂಥವು ಪ್ರಾಚೀನ ಕಾಲಗಳ ಸಾಮಾಜಿಕ ಐತಿಹಾಸಿಕ ವಿಷಯಗಳ ವಿಶ್ವಕೋಶವಾಗಿದೆ ಮನೋರಂಜನ ದೃಷ್ಟಿಯಿಂದ ಅವರ ಗ್ರಂಥವನ್ನು ಮೀರಿಸುವಂತಹ ಮತ್ತೊಂದು ಕೃತಿ ಇಲ್ಲ ಎಂದು ಹೇಳಬಹುದು.
  • ಹೇರೋಡೊಟಸ್‌ಇತಿಹಾಸವು ಅದರ ವಿಶಾಲವಾದ ಭೌಗೋಳಿಕ ಕ್ಷೇತ್ರ ವಿವಿಧ ರೂಪದ ಸಂಘ ಸಂಸ್ಥೆಗಳು ಮತ್ತು ವಿವಿಧ ಜನರ ಸಾಂಪ್ರದಾಯಿಗಳನ್ನು ವಿಶ್ಲೇಷಿಸಿದ್ದಾನೆ.
  • ಹೇರೋಡೊಟಸ್ ತನ್ನ ಕೃತಿಯಲ್ಲಿ ಜ್ಞಾನ ಕುತೂಹಲ ಪ್ರಾಮಾಣಿಕ್ಯತೆ ಮತ್ತು ಉತ್ತಮ ತೀರ್ಪು ಮನ ಸೆಳೆಯುವ ಅದರ ವೈವಿಧ್ಯತೆಯ ಬಗ್ಗೆ ತಿಳಿಸಿಕೊಟ್ಟಿದ್ದಾನೆ
  • ದಂತ ಕಥೆಗಳನ್ನು ವೈಜ್ಞಾನಿಕ ಇತಿಹಾಸವಾಗಿ ಪರಿವರ್ತಿಸುವ ಕಲೆಯನ್ನು ಪರಿಶೋಧಿಸಿದನು
  • ಇತಿಹಾಸವು ಪೌರಾಣಿಕ ಅಥವಾ ಧಾರ್ಮಿಕವಾಗಿರದೆ ಮಾನವನ ಕಲ್ಯಾಣದ ಉದ್ದೇಶವಾಗಿರಬೇಕು ಎಂದು ನಂಬಿದ್ದನು
  • ಇತಿಹಾಸವು ಮಾನವನಿಗೆ ಅರಿವನ್ನು ಮೂಡಿಸುವುದು ಮತ್ತು ಅವನ ಕಾರ್ಯಗಳನ್ನು ವಿವರಿಸುವುದೇ ಇತಿಹಾಸದ ಪ್ರಮುಖ ಉದ್ದೇಶವಾಗಿತ್ತು ಎಂದು ಸಾರಿದನು.
  • ಮಾನವರು ಏನು ಮಾಡಿದರು ಮತ್ತು ಹೇಗೆ ಮಾಡಿದರು ಎಂಬುದನ್ನು ಶೋಧನೆ ಮಾಡುವುದೇ ಇತಿಹಾಸದ ಕರ್ತವ್ಯ ಎಂದು ಹೇಳಿದ.
  • ಮರಣ : ಹೇರೋಡೊಟಸ್ ಎರಡನೇ ತವರೂರಾಗಿದ್ದ ಅಥೇನ್ಸ್ ನಲ್ಲಿ ಕ್ರಿಸ್ತಪೂರ್ವ 430ರಲ್ಲಿ ಮರಣ ಹೊಂದಿದನು.

ರೋಮನ್ ಇತಿಹಾಸ ಶಾಸ್ತ್ರದ ಪ್ರಮುಖ ಗುಣಲಕ್ಷಣಗಳನ್ನು ವಿಶ್ಲೇಷಿಸಿ ಅಥವಾ ರೋಮ್ ಇತಿಹಾಸ ಶಾಸ್ತ್ರದ ವೈಶಿಷ್ಟ್ಯಗಳನ್ನು ಗುರುತಿಸಿ.

ಪೀಠಿಕೆ : ರೋಮನ್ನರ ಇತಿಹಾಸವು ಮೂರನೇ ಶತಮಾನದಿಂದ ಪ್ರಾರಂಭವಾಗುತ್ತದೆ ಪ್ರಾರಂಭದಲ್ಲಿ ಇವರು ಯಾವುದೇ ರೀತಿಯ ಇತಿಹಾಸವನ್ನು ಬರೆಯಲು ಪ್ರಾರಂಭಿಸಲಿಲ್ಲ ಆದರೆ ಮೂರನೇ ಶತಮಾನದ ಕೊನೆಯಲ್ಲಿ ಗ್ರೀಕ್ ಸಾಹಿತ್ಯದ ಪರಿಚಯ ವಾದ ಮೇಲೆ ರೋಮನ್ ಇತಿಹಾಸವನ್ನು ಬರೆಯಲು ಸಾಧ್ಯವಾಯಿತು

  • ಫೇಬಿಯನ್ ಫಿಕ್ಸರ್ ರೂಮ್ ಆರಂಭಿಕ ಇತಿಹಾಸಕಾರ ಅವನ ಪ್ರಸಿದ್ಧ ಕೃತಿ ಅನ್ಸಲ್ ಈ ಕೃತಿ ಪ್ರಾರಂಭದಿಂದ ಆಗಸ್ಟ್ ಸೀಸರ್ ನ ಕಾಲದವರೆಗೂ ವಿವರಿಸುತ್ತದೆ.
  • ಇತಿಹಾಸ ರಂಗದಲ್ಲಿ ರೋಮನ್ನರು ಗ್ರೀಕರನ್ನು ಅನುಕರಿಸಲು ಪ್ರಯತ್ನಿಸಿದರು.
  • ರೋಮನ್ ಇತಿಹಾಸ ಶಾಸ್ತ್ರವು ಗ್ರೀಕ್ ಇತಿಹಾಸ ಶಾಸ್ತ್ರದಂತೆ ಮಾನವೀಯ ಗುಣಗಳನ್ನು ಒಳಗೊಂಡಿತು.
  • ಆಗಸ್ಟ್ ಸೀಸರ್ ನ ಕಾಲದಲ್ಲಿದ್ದ ಶ್ರೇಷ್ಠ ಇತಿಹಾಸಕಾರ ಲಿವಿ ಎಂಬುವನು ರೋಮನ್ ಹಿಸ್ಟರಿ ಎಂಬ ಕಾವ್ಯವನ್ನು ರಚಿಸಿದನು.
  • ಪಿನ್ಸಿ ಎಂಬ ರೋಮ್ ಇತಿಹಾಸಕಾರ ನ್ಯಾಚುರಲ್ ಹಿಸ್ಪರಿ ಎಂಬ ಕೃತಿಯನ್ನು ರಚಿಸಿದನು.
  • ಪ್ರಾರಂಭದ ರೂಮ್ ಇತಿಹಾಸಕಾರರು ಮೊದಲಿಗೆ ಮನುಷ್ಯನ ಸಾಧನೆಗಳನ್ನು ಮತ್ತು ವೈಫಲ್ಯಗಳನ್ನು ಕೇಂದ್ರೀಕರಿಸುವಲ್ಲಿ ಮಾತ್ರ ಆಸಕ್ತಿ ತೋರಿದರು.
  • ರೂಮನ್ನರ ಇತಿಹಾಸ ಶಾಸ್ತ್ರವು ವಿಜ್ಞಾನವಾಗಿ ತತ್ವಶಾಸ್ತ್ರದ ವ್ಯವಸ್ಥೆಯನ್ನು ಆಧರಿಸಿವೆ.
  • ಕ್ರೈಸ್ತ ಧರ್ಮಕ್ಕೆ ಸಾರ್ವತಿಕ ಧರ್ಮವಾಗಿ ಮಾಡುವ ದೃಷ್ಟಿಯಿಂದ ಗ್ರೀಕ್ ರೋಮನ್ ಇತಿಹಾಸವನ್ನು ಕ್ರೈಸ್ತ ಇತಿಹಾಸದೊಂದಿಗೆ ಸಂಯೋಜನೆ ಮಾಡಲು ಪ್ರಯತ್ನಿಸಿದರು.
  • ಬೈಬಲ್ ಒಂದು ಕೇವಲ ಧರ್ಮ ಗ್ರಂಥವಲ್ಲ ಆದರೆ ಇದು ಅತ್ಯಮೂಲ್ಯವಾದ ಐತಿಹಾಸಿಕ ಗ್ರಂಥವಾಗಿದ್ದು ಅದು ಹಿಂದಿನ ಕಾಲದಿಂದ ಮುಂದಿನ ಭವಿಷ್ಯದವರೆಗೂ ದೇವರ ಯೋಜನೆಯ ಬಗ್ಗೆ ವಿವರಿಸುತ್ತದೆ.
  • ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಮನುಷ್ಯರಾದ ಅಡಂ ಮತ್ತು ಈವ್ ಅವರ ಅಂತ್ಯದವರೆಗೂ ನಂತರ ಮುಂದಿನ ಭವಿಷ್ಯದೊಂದಿಗೆ ದೇವರ ರಾಜ್ಯವನ್ನು ಸ್ಥಾಪಿಸುವ ಬಗ್ಗೆ ಬೈಬಲ್ ನ ಹೊಸ ಒಡಂಬಡಿಕೆಯಲ್ಲಿ ಸೇಂಟ್ ಪಾಲ್ ಎಂಬ ಕ್ರಿಶ್ಚಿಯನ್ ಇತಿಹಾಸಕಾರನು ವಿವರಿಸುವ ಐತಿಹಾಸಿಕ ಚಿಂತನೆಯ ಕಾಲದ ಪರಿಕಲ್ಪನೆಯನ್ನು ನೀಡಿದರು.
  • ಕ್ರಿಶ್ಚಿಯನ್ ಇತಿಹಾಸಕಾರರು ಚರ್ಚಾ ವಿಧಾನ ಶಾಸ್ತ್ರದ ಇತಿಹಾಸವನ್ನು ಮೂರು ಯುಗಗಳಾಗಿ ಗುರುತಿಸಿದ್ದಾರೆ
  • ಮೊದಲನೇ ಯುಗ ಅಡಂನಿಂದ ಮೋಸಸ್ ವರೆಗೆ
  • ಎರಡನೇ ಯುಗ ಮೋಸಸ್ ನಿಂದ ಏಸುಕ್ರಿಸ್ತನವರೆಗೆ ಮತ್ತು
  • ಮೂರನೇ ಯುಗ ಯೇಸು ಕ್ರಿಸ್ತನ ಜನನದ ನಂತರದ ಕಾಲ ಎಂದು ವರ್ಗೀಕರಿಸಿದ್ದಾರೆ
  • ಚರ್ಚಾ ಇತಿಹಾಸ ಶಾಸ್ತ್ರಕ್ಕೆ ಕೊಡುಗೆ ನೀಡಿದ ಪ್ರಮುಖ ಇತಿಹಾಸಕಾರರು
  • ಯುಸೇಬಿಯ
  • ಸ್ಸಂತ ಅಗಸ್ಟ್ ಸ್ಟೈನ್
ಚರ್ಚ್ ಇತಿಹಾಸ ಶಾಸ್ತ್ರದ ಗುಣಲಕ್ಷಣಗಳನ್ನು ವಿವರಿಸಿ.

ಪೀಠಿಕೆ : ಚರ್ಚಾ ಇತಿಹಾಸ ಶಾಸ್ತ್ರವು ತನ್ನದೇ ಆದ ವಿಶೇಷ ಲಕ್ಷಣಗಳನ್ನು ಒಳಗೊಂಡು ಅದರಲ್ಲೂ ಮುಖ್ಯವಾಗಿ ಮಧ್ಯಕಾಲದ ಇತಿಹಾಸ ಲೇಖನ ಕಲೆಯನ್ನು ರಚಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ ಚರ್ಚ್ ಇತಿಹಾಸ ಶಾಸ್ತ್ರದ ಮುಖ್ಯ ಗುಣಲಕ್ಷಣಗಳನ್ನು ಈ ಕೆಳಗಿನಂತ ವಿವರಿಸಬಹುದಾಗಿದೆ

ಅವುಗಳೆಂದರೆ :

  • ಚರ್ಚ್ ಇತಿಹಾಸ ಶಾಸ್ತ್ರದ ಇತಿಹಾಸಕಾರರು ಪ್ರೇರಿತ ಮತ್ತು ಪವಿತ್ರ ಬರಹಗಳಿಗೆ ವಿಶೇಷ ತಂತ್ರವನ್ನು ಅಭಿವೃದ್ಧಿಪಡಿಸಿದರು
  • ಇದು ಮನುಷ್ಯನಿಗೆ ದೇವರ ಮಾರ್ಗಗಳನ್ನು ವಿವರಿಸುವುದರ ಬಗ್ಗೆ ಸಂಬಂಧಿಸಿದ
  • ಚರ್ಚ್ ಇತಿಹಾಸ ಶಾಸ್ತ್ರ ವಿಧಾನವು ವಸ್ತುನಿಷ್ಠವಾಗಿಲ್ಲ ಆದರೆ ವ್ಯಕ್ತಿನಿಷ್ಠವಾಗಿದೆ
  • ಚರ್ಚ್ ಇತಿಹಾಸ ಶಾಸ್ತ್ರ ವಿಧಾನವು ಕಾರಣಗಳನ್ನು ಆಧರಿಸಿಲ್ಲ ಬದಲಾಗಿ ನಂಬಿಕೆಗಳನ್ನು ಆಧರಿಸಿದ
  • ಚರ್ಚ್ ಇತಿಹಾಸ ಶಾಸ್ತ್ರ ವಿಧಾನವು ಕಾಲಗಣನೆಯಲ್ಲಿ ಹೆಚ್ಚು ದೋಷರಹಿತವಾಗಿದೆ
  • ರೂಮ್ ಸಾಮ್ರಾಜ್ಯದ ಪತನಕ್ಕೆ ಕ್ರೈಸ್ತ ಧರ್ಮವೇ ಕಾರಣ ಎಂಬ ಆರೋಪವನ್ನು ಸಮರ್ಥಿಸಲು ಕ್ರೈಸ್ತ ಇತಿಹಾಸಕಾರರು ಈ ವಿಧಾನವನ್ನು ಅಭಿವೃದ್ಧಿಪಡಿಸಿದರು
  • ಚರ್ಚ ಇತಿಹಾಸ ಶಾಸ್ತ್ರವು ಧಾರ್ಮಿಕ ಮತ್ತು ಜಾತ್ಯಾತೀತ ಎಂಬ ಎರಡು ನೆಲೆಗಳನ್ನು ಒಳಗೊಂಡಿದೆ
  • ಚರ್ಚ್ ಇತಿಹಾಸ ಶಾಸ್ತ್ರವು ಪವಾಡಗಳು ಮತ್ತು ಸಂತರ ವಿಚಾರಧಾರೆಗಳನ್ನು ಒಳಗೊಂಡಿದೆ
  • ಚಾರ್ ಮ್ಯಾಗ್ನ ಆಳ್ವಿಕೆಯ ನಂತರ ಹೊಸ ಪ್ರಕಾರದ ಐತಿಹಾಸಿಕ ಸಾಹಿತ್ಯ ಯುರೋಪ್ ಖಂಡದಲ್ಲಿ ಅಸ್ತಿತ್ವಕ್ಕೆ

ಬಂತು ಉದಾಹರಣೆಗೆ : ಅನ್ಸಲ್ ಮತ್ತು ಕ್ರಾನಿಕಲ್ಸ್

  • ಚರ್ಚ್ ಇತಿಹಾಸ ವಿಧಾನವು ಆಗಿನ ಲೇಖಕರು ಜೀವಂತವಾಗಿದ್ದ ನಡೆದ ಘಟನೆಗಳ ನಿರೂಪಣೆಯಾಗಿವೆ

ಉಪಸಂಹಾರ :

ರೋಮ್ ಸಾಮ್ರಾಜ್ಯದ ಪತನದ ನಂತರ ಯುರೋಪಿನ ಕ್ರಿಶ್ಚನ್ ಇತಿಹಾಸಕಾರರು ಇತಿಹಾಸಕ್ಕೆ ವಿಶಾಲ ವ್ಯಾಪ್ತಿಯನ್ನು ನೀಡುವ ಸಲುವಾಗಿ ಆಡಳಿತದ ಅಸಮರ್ಥತೆ ಭ್ರಷ್ಟಾಚಾರ ಹೆಚ್ಚುತ್ತಿರುವ ತೆರಿಗೆ ಸಾಮಾಜಿಕ ಅವ್ಯವಸ್ಥೆ ಆರ್ಥಿಕ ಒತ್ತಡ ಕಾನೂನು ಸುವ್ಯವಸ್ಥೆ ಮುಂತಾದವುಗಳ ವಿರುದ್ಧ ತಮ್ಮದೇ ಆದ ದುನಿಯನ್ನು ಎತ್ತುವ ಮೂಲಕ ಇತಿಹಾಸದ ರಚನೆಗೆ ಕಾರಣೀಭೂತರಾದರು.

ಇತಿಹಾಸದ ಬರವಣಿಗೆಯ ಮೇಲೆ ಪುನರುಜ್ಜಿವನದ ಪ್ರಭಾವವನ್ನು ವಿವರಿಸಿ / ಅಥವಾ ಇತಿಹಾಸ ಶಾಸ್ತ್ರದ ಮೇಲೆ ನವೋದಯ ಕಾಲದ ಪ್ರಭಾವವನ್ನು ವಿವರಿಸಿ / ಅಥವಾ ಪುನರುಜೀವನ ಕಾಲದ ಇತಿಹಾಸ ಲೇಖನ ಕಲೆಯ ಸ್ವರೂಪ ಮತ್ತು ಪ್ರಭಾವವನ್ನು ವಿವರಿಸಿ.

ಪೀಠಿಕೆ : ಪುನರುಜ್ಜಿವನ ಚಳುವಳಿಯು 15ನೇ ಶತಮಾನದಲ್ಲಿ ಯುರೋಪಿನಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತಂದಿತು ಐತಿಹಾಸಿಕ ಅಧ್ಯಯನಗಳ ಹೊಸ ದೃಷ್ಟಿಕೋನವನ್ನು ಪಡೆಯಿತು ಈ ಚಿಂತನೆಯು ಪುನರುಜ್ಜಿವನ ಪ್ರಾರಂಭವಾಗಲು ಕಾರಣವಾಯಿತು ಇದರೊಂದಿಗೆ ಇತಿಹಾಸದ ದಾಖಲೆಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಕ್ರಮ ಬೆಳೆಯಿತು ಮತ್ತು ಇತಿಹಾಸದಲ್ಲಿದ್ದ ಸುಳ್ಳು ಮಾಹಿತಿಯನ್ನು ತಿರಸ್ಕರಿಸಲಾಯಿತು ಪುನರುಜ್ಜಿವನದ ಆರಂಭದೊಂದಿಗೆ ಇತಿಹಾಸದ ವಿಷಯ ವಸ್ತು ಪ್ರಾಚೀನ ಮಾನವೀಯ ದೃಷ್ಟಿಕೋನವನ್ನು ಪಡೆಯಿತು ಐತಿಹಾಸಿಕ ಚಿಂತನೆಯು ಮತ್ತೊಮ್ಮೆ ಮನುಷ್ಯನನ್ನು ತನ್ನ ಕೇಂದ್ರವಾಗಿಟ್ಟುಕೊಂಡು ತನ್ನ ಪ್ರಭಾವ ಬೀರಿತು

ಪುನರುಜ್ಜಿವನ ಮತ್ತು ಇತಿಹಾಸ ಲೇಖನ ಶಾಸ್ತ್ರ

  • ಪುನರುಜ್ಜಿವನ ಚಳುವಳಿಯು ಇಟಲಿಯಲ್ಲಿ ಆರಂಭವಾಯಿತು.
  • ಆಟೋಮನ್ ಟರ್ಕರು ಕಾನ್ಸಂಟ್ ನೋಪಲ್ ಅನ್ನು ವಶಪಡಿಸಿಕೊಂಡಿದ್ದರಿಂದ ಅಲ್ಲಿನ ಅನೇಕ ವಿದ್ವಾಂಸರು | ಇಟಲಿಗೆ ಪಲಾಯನ ಮಾಡಿದರು ಇದರಿಂದಾಗಿ ಇಟಲಿಯಲ್ಲಿ ರೂಮ್ ಪದ್ಧತಿಗಳು ಮತ್ತು ಗ್ರೀಕ್ ನ ಅನೇಕ ವಿಚಾರಗಳು ಗ್ರಂಥದ ರೂಪದಲ್ಲಿ ಪ್ರಕಟಿಸಲ್ಪಟ್ಟವು.
  • ಮಧ್ಯಕಾಲೀನ ಯುಗದಲ್ಲಿ ಐತಿಹಾಸಿಕ ಅಧ್ಯಯನಗಳು ಹಲವಾರು ದೋಷಗಳಿಂದ ಬಳಲುತ್ತಿದ್ದವು ಅವುಗಳೆಂದರೆ
  • ವಿಮರ್ಶಾತ್ಮಕ ಮನೋಭಾವದ ಕೊರತೆ
  • ಇತಿಹಾಸದ ವ್ಯಾಪ್ತಿ ಬಹಳ ಸೀಮಿತವಾಗಿತ್ತು
  • ಚರ್ಚ್ ಪ್ರಬಲವಾಗಿದ್ದರಿಂದ ಇತಿಹಾಸಕಾರರು ಚರ್ಚು ಮತ್ತು ಅದರ ಬಗ್ಗೆ ಮಾತ್ರ ಬರೆಯಲು ಆಸಕ್ತಿ ಹೊಂದಿದ್ದರು
  • ಘಟನೆಗಳ ಬಗ್ಗೆ ನಿಜವಾದ ಕಾರಣವನ್ನು ಹುಡುಕುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ
  • ಘಟನೆಗಳು ನಡೆಯುವುದು ದೇವರಿಂದ ಎಂಬ ಪ್ರವೃತ್ತಿ ಇತಿಹಾಸಕಾರರಲ್ಲಿತ್ತು
  • ಪುನರುಜ್ಜಿವನ ಕಾಲದ ಇತಿಹಾಸವು ವೈಚಾರಿಕತೆ ಮತ್ತು ಜಾತ್ಯಾತೀತ ಅಂಶಗಳಿಂದ ಪ್ರಭಾವಿತವಾಗಿತ್ತು
  • ಪುನರುಜ್ಜಿವನ ಕಾಲದ ಇತಿಹಾಸಕ್ಕೆ ಹೊಸ ಆಯಾಮ ಕೊಟ್ಟ ಇತಿಹಾಸಕಾರರೆಂದರೆ : ಲಿವಿ, ಪಾಲಿಬಿಯಾಸ್, ಟ್ಯಾಸಿಟಸನ್,

ಇತಿಹಾಸ ಬರವಣಿಗೆಯ ಮೇಲೆ ಪುನರುಜ್ಜಿವನದ
ಪ್ರಭಾವ.

  • ಪುನರ್ಜೀವನ ಕಾಲವು ಮನುಷ್ಯನ ಸಾಮರ್ಥ್ಯಗಳಿಗೆ ಹೊಸ ವಿಶ್ವಾಸವನ್ನು ಮೂಡಿಸುವ ಮತ್ತು ಮನುಷ್ಯನ ಇಚ್ಛಾ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆಯಿತು .
  • ಪುನರುಜ್ಜಿವನ ಕಾಲವು ಇತಿಹಾಸ ಲೇಖನ ಕಲೆಯ ಮೇಲೆ ಗಾಢವಾದ ಪರಿಣಾಮ ಬಿರಿತು ಇದು ಇತಿಹಾಸಕ್ಕೆ ಹೊಸ ಮಾನವೀಯ ದೃಷ್ಟಿಕೋನಕ್ಕೆ ಸಾಕ್ಷಿಯಾಯಿತು ಸಾಮಾನ್ಯ ಇತಿಹಾಸಕಾರರು ಕೂಡ ವರಹೊಮ್ಮುವಲ್ಲಿ ಯಶಸ್ವಿಯಾಯಿತು ಐತಿಹಾಸಿಕ ವಿಮರ್ಶೆಯಲ್ಲಿ ಬದಲಾವಣೆ ತಂದಿತು.

ಪುನರುಜ್ಜಿವನ ಇತಿಹಾಸ ಬರವಣಿಗೆಗಳ ಲಕ್ಷಣಗಳು.

1. ಪುನರುಜ್ಜಿವನ ಕಾಲದಲ್ಲಿ ಇತಿಹಾಸದ ಮಾನವೀಯ ದೃಷ್ಟಿಕೋನಕ ಪ್ರಾಮುಖ್ಯತೆ ಪಡೆಯಿತು.

  • ನವೋದಯ ದೃಷ್ಟಿಕೋನವು ಪ್ರಾಚೀನ ಗ್ರೀಕರು ಮತ್ತು ರೋಮನ್ನರ ಆಧಾರದ ಮೇಲೆ ಜೀವನದ ಮಾನವೀಯ ದೃಷ್ಟಿಕೋನಕ್ಕೆ ಮರಳುವುದನ್ನು ಪ್ರತಿನಿಧಿಸಿತು.
  • ಈ ಕಾಲದ ಇತಿಹಾಸವು ಮನುಷ್ಯನನ್ನು ಕೇಂದ್ರೀಕರಿಸಿಕೊಂಡು ರಚಿಸಲ್ಪಟ್ಟಿತು.

2. ಪುನರುಜ್ಜಿವನ ಕಾಲದಲ್ಲಿ ಸಾಮಾನ್ಯ ಇತಿಹಾಸಕಾರರು ಕೂಡ ಪ್ರಾಮುಖ್ಯತೆ ಪಡೆದರು.

  • ಈ ಕಾಲದಲ್ಲಿ ಜನರ ಜೀವನ ಮತ್ತು ಚಿಂತನೆಗಳು ಕ್ರಮೇಣ ಜಾತ್ಯತೀತಕರಣಗೊಂಡವು
  • ಇತಿಹಾಸದಲ್ಲಿ ದೇವತಾ ಶಾಸ್ತ್ರದ ವ್ಯಾಕರಣಗಳು ಮತ್ತು ಹಲೌಕಿಕ ಅಂಶಗಳು ಕಣ್ಮರೆಯಾಯಿತು
  • ರೋಮನ್ ಕಾನೂನು ಪುನರುಜ್ಜಿವನದ ಐತಿಹಾಸಿ ಬರವಣಿಗೆಗೆ ಉತ್ತೇಜಿಸಿತು
  • ಈ ಕಾಲದಲ್ಲಿ ಹೋಪ್ ಮತ್ತು ಉಳಿಗೆ ಮಾನ್ಯ ಪ್ರಭಾವಗಳಿಂದ ಮುಕ್ತವಾಗಿತ್ತು
  • ಇತಿಹಾಸದ ಬರವಣಿಗೆಯು ವಾಸ್ತವಿಕ ಅಂಶಗಳಿಂದ ರಚಿಸಲ್ಪಟ್ಟಿತು.

3. ಪುನರುಜ್ಜಿವನ ಕಾಲದಲ್ಲಿ ಪುರಾತತ್ವ ವಿಜ್ಞಾನದ ಸ್ಥಾಪನೆಯಾಯಿತು.

  • 14ನೇ ಶತಮಾನದಲ್ಲಿ ಕಂಡು ಬಂದ ಐತಿಹಾಸಿಕ ನಾಣ್ಯಗಳು ಶಾಸನಗಳು ಇತಿಹಾಸಕಾರರಿಗೆ ಹಿಂದೆ ನಡೆದ ಘಟನೆಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯಿತು
  • ಪ್ರಾಚೀನ ವಸ್ತುಗಳ ಸಂಗ್ರಹಗಳಲ್ಲಿ ಇತಿಹಾಸಕಾರರಲ್ಲಿ ಹೆಚ್ಚಿನ ಉತ್ಸಾಹ ಉಂಟಾಯಿತು
  • ಪ್ರಾಚೀನ ಇತಿಹಾಸವನ್ನು ತಿಳಿಯುವುದಕ್ಕಾಗಿ ಪುರತತ್ವ ಇಲಾಖೆಯನ್ನೇ ಆಗಿದೆ ಇತಿಹಾಸಕಾರರು ಸ್ಥಾಪಿಸಿದರು.

4. ಪುನರುಜ್ಜಿವನ ಕಾಲದಲ್ಲಿ ಇತಿಹಾಸಕ್ಕೆ ಐತಿಹಾಸಿಕ ವಿಮರ್ಶೆಯ ಮುನ್ನುಡಿ ಬರೆಯಿತು.

  • ವಿಮರ್ಶೆಯ ಹೊಸ ರೂಪ ಭಾಷಾ ಶಾಸ್ತ್ರದ ವಿಮರ್ಶೆ ಇತಿಹಾಸ ಬರವಣಿಗೆಯನ್ನು ಸಾಂಪ್ರದಾಯ ಹಿಡಿತದಿಂದ ಮತ್ತು ಅಧಿಕಾರದ ಬಂಧನದಿಂದ ಮುಕ್ತಗೊಳಿಸಿದರು.
  • ಈ ಕಾಲದ ಮಾನವತವಾದಿ ವಿದ್ವಾಂಸರು ಅನೇಕ ಮೂಲದ ಕುರಿತು ಪೌರಾಣಿಕ ಅಂಶಗಳನ್ನು ಗುರುತಿಸಿದರು
  • ಈ ಕಾಲದಲ್ಲಿ ಅಧಿಕೃತ ಕಾಲ ಯುಗಗಳನ್ನು ಗುರುತಿಸಿದರು
ನಿಕೊಲೊ ಮ್ಯಾಕಿಯಾವೆಲ್ಲಿ/ ಮೆಕಾವಲ್ಲಿ ಬಗ್ಗೆ ಟಿಪ್ಪಣಿ ಬರೆಯಿರಿ.
  • ನವೋದಯ ಕಾಲದ ಶ್ರೇಷ್ಠ ರಾಜತಾಂತ್ರಿಕ, ಲೇಖಕ, ತತ್ವಜ್ಞಾನಿ ಮತ್ತು ಇತಿಹಾಸಕಾರ.
  • ಆಧುನಿಕ ರಾಜಕೀಯದ ತತ್ವಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

ಜೀವನ

  • ನಿಕೊಲೊ ಮ್ಯಾಕಿಯಾವೆಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ 1469 ರಲ್ಲಿ ಬಡ ಕುಟುಂಬದಲ್ಲಿ ಜನಿಸಿದರು.
  • ತಂದೆ : ಬರ್ನಾರ್ಡೊ ನಿಕೋಲೋ ಮ್ಯಾಕಿಯಾವೆಲ್ಲಿ, ತಾಯಿ : ಡಿ ಸ್ಟೆಫಾನೊ
  • ಮರಣ ಜೂನ್ 21, 1527

ಕೃತಿಗಳು

  • 1516 ರಲ್ಲಿ ದಿ ಡಿಸ್ಕೋರ್ಸ್ ಆನ್ ಲಿವಿ
  • 1520 ರಲ್ಲಿ ದಿ ಆರ್ಟ್ ಆಫ್ ವಾರ್

ಸಾಧನೆಗಳು

  • ಅವರು ಕ್ರಿಶ್ಚಿಯನ್ ಧರ್ಮಕ್ಕೆ ಪ್ರತಿಕೂಲರಾಗಿದ್ದರು ಮತ್ತು ನಮ್ರತೆ ಮತ್ತು ವಿಧೇಯತೆಯ ಕ್ರಿಶ್ಚಿಯನ್ ಸದ್ಗುಣಗಳಿಗೆ ಪ್ರಾಮಾಣಿಕವಾಗಿ ಬದ್ಧರಾಗಿರುವ ಜನರು ರಾಜಕೀಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬರುವುದಿಲ್ಲ ಎಂದು ದೃಢವಾಗಿ ನಂಬಿದ್ದರು.
  • ಅವರು ಗಣರಾಜ್ಯವಾದಿ ಮತ್ತು ವಿದೇಶಿ ಆಕ್ರಮಣ ಮತ್ತು ದೇಶೀಯ ಕ್ರಾಂತಿಯ ಮುಖಾಂತರ ಪ್ರಬಲ ರಾಜ್ಯವನ್ನು ನಿರ್ಮಿಸಲು ಆಸಕ್ತಿ ಹೊಂದಿರುವ ದೇಶಭಕ್ತರಾಗಿದ್ದಾರೆ.
  • ಮ್ಯಾಕಿಯಾವೆಲ್ಲಿಯ ವಿಧಾನವು ಐತಿಹಾಸಿಕ ಮತ್ತು ತುಲನಾತ್ಮಕವಾಗಿದೆ. ವಿಶೇಷವಾಗಿ ಪ್ರಾಚೀನ ಪ್ರಾಚೀನತೆಯಿಂದ ಒದಗಿಸಲಾದ ವಿವರಣೆಗಳ ಮೇಲೆ ಅವಲಂಬಿತವಾಗಿದೆ.
  • ಘಟನೆಗಳು ಸಂಭವಿಸಿದ ಸಂದರ್ಭಗಳಿಂದ ಹೇಗೆ ನಿಯಮಾಧೀನವಾಗಿವೆ ಎಂಬುದನ್ನು ತೋರಿಸುವುದು, ಅವುಗಳ ಕಾರಣಗಳನ್ನು ಗುರುತಿಸುವುದು ಮತ್ತು ಮಾನವ ಸಂಬಂಧಗಳು ಮತ್ತು ನಡವಳಿಕೆಯ ಆಧಾರವಾಗಿರುವ ಸಾಮಾನ್ಯ ತತ್ವಗಳನ್ನು ತಿಳಿಸುವುದು ಅವರ ಉದ್ದೇಶವಾಗಿದೆ.

Leave a Comment