Voting pioneers of India 2026: ಭಾರತದ ಮತ ಪ್ರವರ್ತಕರು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳು.
ಶಂಕರಾಚಾರ್ಯರ ಅದೈತ ಸಿದ್ಧಾಂತವನ್ನು ಕುರಿತು ಚರ್ಚಿಸಿ.
ಜೀವನ.
ಶಂಕರಾಚಾರ್ಯರು ಸಾಮಾನ್ಯ ಶಕವರ್ಷ 788 ರಲ್ಲಿ ಕೇರಳದ ಕಾಲಡಿ ಎಂಬಲ್ಲಿ ಜನಿಸಿದರು. ಅವರ ತಂದೆ-ತಾಯಿ : ಶಿವಗುರು ಮತ್ತು ಆರ್ಯಾಂಬ ಅವರು ಸಾಂಸಾರಿಕ ಜೀವನದಲ್ಲಿ ಆಸಕ್ತಿ ಹೊಂದದೆ ಅಧ್ಯಾತ್ಮಿಕ ಜೀವನದ ಕಡೆಗೆ ಒಲವು ತೋರಿದರು ಮತ್ತು ಅವರ ತಾಯಿಯ ಅನುಮತಿಯೊಂದಿಗೆ ಸನ್ಯಾಸಿಯಾದರು. ಶಂಕರರು ಅಧ್ಯಾತ್ಮಿಕ ಗುರುವನ್ನು ಹುಡುಕಿಕೊಂಡು ಹೋದರು. ಅವರು ನರ್ಮದಾ ನದಿಯ ದಡದಲ್ಲಿ ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಭೇಟಿಯಾದರು. ಅವರ ಅಡಿಯಲ್ಲಿ ಅಧ್ಯಯನ ಮಾಡಿ ಅತ್ಯುನ್ನತ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಅವರು ಇಡೀ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮೂರು ಬಾರಿ ಕಾಲ್ನಡಿಗೆಯಲ್ಲಿ, ಅವರು ಎಲ್ಲ ಕಡೆ ಗೆ ಹೋಗಿ ತಮ್ಮ ಅದೈತ ತತ್ವ ವನ್ನು ವಿವರಿಸಿದರು.
ಶಂಕರಾಚಾರ್ಯರ ಕೃತಿಗಳು:
- ವಿವೇಕ ಚೂಡಾಮಣಿ,
- ಶಿವಾನಂದ ಲಹರಿ,
- ಅನಂದ ಲಹರಿ,
- ಸೌಂದರ್ಯ ಲಹರಿ,
- ಭಜಿಗೋವಿಂದಂ, ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
ಶಂಕರಾಚಾರ್ಯರು ಬೋಧಿಸಿದ ತತ್ವಗಳು
- ಶಂಕರಾಚಾರ್ಯರು ಅದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
- ಅದೈತ ತತ್ವವನ್ನು ಹರಡಲು ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು
ಸ್ಥಾಪಿಸಿದರು. ಅವುಗಳೆಂದರೆ:
1) ಪುರಿಯಲ್ಲಿ ಗೋವರ್ಧನ ಪೀಠ (ಒರಿಸ್ಸಾ- ಪೂರ್ವ)
2) ದ್ವಾರಕದಲ್ಲಿ ಕಾಳಿಕಾ ಪೀಠ (ಗುಜರಾತ್ – ಪಶ್ಚಿಮ)
3) ಬದರಿನಾಥದಲ್ಲಿ ಜ್ಯೋತಿರ್ಮಠ (ಯುಪಿ – ಉತ್ತರ)
4) ಶೃಂಗೇರಿಯಲ್ಲಿರುವ ಶಾರದ ಪೀಠ (ಕರ್ನಾಟಕ – ದಕ್ಷಿಣ)
- ಬ್ರಹ್ಮ ಅಂತಿಮ ಸತ್ಯ, ಅವನು ನಿರ್ಗುಣ ನಿರಾಕಾರ ಮತ್ತು ಸ್ವಪ್ರಕಾಶ ಎಂದು ಪ್ರತಿಪಾದಿಸಿದರು.
- ಲೌಕಿಕ ಪ್ರಪಂಚಕ್ಕೆ ಆದ್ಯತೆ ನೀಡದೆ ಅಧ್ಯಾತ್ಮಿಕ ಪ್ರಪಂಚಕ್ಕೆ ಹೆಚ್ಚು ಒತ್ತು ನೀಡಿದರು.
- ಪ್ರವೆಂಚವನ್ನು ಮಾಯೆಯೆಂದರೆ ಪ್ರಪಂಚ ಒಂದು ಭ್ರಮೆ ಎಂದು ಪ್ರತಿಪಾದಿಸಿದರು.
- ಆತ್ಮ ಮತ್ತು ವರಮಾತ್ಮ ಎರಡು ಒಂದೇ ಎಂದು ಪ್ರತಿಪಾದಿಸಿದರು
- ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ನಾನೇ ಬ್ರಹ್ಮ ಎಂದು ಪ್ರತಿಪಾದಿಸಿದರು.
- ಅಜ್ಞಾನಿಯು ತನ್ನ ಅಂತರಂಗದಲ್ಲಿ ಅವನನ್ನು ಅರಿತುಕೊಳ್ಳದೆ ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಾನೆ ಎಂದು ಪ್ರತಿಪಾದಿಸಿದರು.
- ಮೋಕ್ಷವನ್ನು ಪಡೆಯಲು ಶಂಕರಾಚಾರ್ಯರು ‘ಜ್ಞಾನ ಮಾರ್ಗ’ (ಜ್ಞಾನದ ಮಾರ್ಗ) ವನ್ನು ಪ್ರತಿಪಾದಿಸಿದರು. .
- ಶಿವ, ವಿಷ್ಣು, ಸೂರ್ಯ, ಗಣೇಶ, ಕುಮಾರ ಮತ್ತು ಶಕ್ತಿಯ ಆರಾಧನೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಅವರು ವಿವಿಧ ಆರಾಧನೆಗಳನ್ನು ಏಕೀಕರಿಸಲು ಶ್ರಮಿಸಿದರು. ಆದ್ದರಿಂದ ಅವರನ್ನು ‘ಷಣ್ಮಥ ಸ್ಥಾಪನಾಚಾರ್ಯ’ ಎಂದು ಕರೆಯುತ್ತಾರೆ.
ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.
ಆರಂಭಿಕ ಜೀವನ(ಸಾ. ಶ.1017-1137).
ರಾಮಾನುಜರು ಅವರು 1017 CE ಯಲ್ಲಿ ಚೆನ್ನೈ ಬಳಿಯ ಶ್ರೀ ವೆರಂಬದೂರಿನಲ್ಲಿ ಜನಿಸಿದರು. ಇವರ ತಂದೆ ತಾಯಿ ಕೇಶವ ಸೋಮಯಾಜಿ ಮತ್ತು ಕಾಂತಿಮತಿ. ಅವರು ಯಾದವಪ್ರಕಾಶದಲ್ಲಿ ಕಂಚಿಯಲ್ಲಿ ಅಧ್ಯಯನ ಮಾಡಿದರು. ಅವರ ತಾಯಿಯ ಇಚ್ಛೆಯಂತೆ, ಅವರು 16 ನೇ ವಯಸ್ಸಿನಲ್ಲಿ ತಂಗಮ್ಮನನ್ನು ವಿವಾಹವಾದರು. ಅವರ ವೈವಾಹಿಕ ಜೀವನವು ಅತೃಪ್ತಿಕರವಾಗಿತ್ತು. ಹಾಗಾಗಿ ತಮ್ಮ ಕುಟುಂಬವನ್ನು ತೊರೆದು ಸನ್ಯಾಸಿಯಾದರು. ಅವರು ಶ್ರೀರಂಗಕ್ಕೆ ಹೋದರು. ನಂತರ ರಾಮಾನುಜರು ಶ್ರೀರಂಗಂ ಮರದ ಮುಖ್ಯಸ್ಥರಾಗಿ ವೈಷ್ಣವ ಪಂಥ ವನ್ನು ಜನಪ್ರಿಯಗೊಳಿಸಿದರು. ಇದು ಕುಲೋತ್ತುಂಗ ಚೋಳನಿಗೆ ಇಷ್ಟವಾಗಲಿಲ್ಲ ಹಾಗಾಗಿ ರಾಮಾನುಜರು ಶ್ರೀರಂಗವನ್ನು ತೊರೆದು ಕರ್ನಾಟಕಕ್ಕೆ ಬಂದರು ಅವರಿಗೆ ಹೊಯ್ಸಳರ ಅರಸ ವಿಷ್ಣುವರ್ಧನ ಆಶ್ರಯವನ್ನು ನೀಡಿದನು. ರಾಮಾನುಜರು ಮೇಲುಕೋಟೆಯಲ್ಲಿ ವೈಷ್ಣವ ಮಠ ಸ್ಥಾಪಿಸಿ ಅಲ್ಲಿಯೇ 20ವರ್ಷ ನೆಲೆಸಿದರು ಕುಲೋತ್ತುಂಗ ನ ಮರಣದ ನಂತರ ತಮಿಳುನಾಡಿಗೆ ಹಿಂತಿರುಗಿದರು ಕೊನೆಗೆ ಅವರು ಸಾ.ಶ. 1137 ರಲ್ಲಿ ತಮ್ಮ 120 ನೇ ವಯಸ್ಸಿನಲ್ಲಿ ಶ್ರೀರಂಗಂ ಎನ್ನುವ ಸ್ಥಳದಲ್ಲಿ ಮರಣಹೊಂದಿದರು.
ರಾಮಾನುಜರ ಕೃತಿಗಳು:
- ವೇದಾಂತ ಸಾರ,
- ವೇದಾಂತ ಸಂಗ್ರಹ,
- ವೇದಾಂತ ಸೂತ್ರ.
- ಗೀತ ಭಾಷ್ಯ,
- ಶ್ರೀ ಭಾಷ್ಯ, ಮುಂತಾದವು ರಾಮಾನುಜಾಚಾರ್ಯರ ಪ್ರಮುಖ ಕೃತಿಗಳಾಗಿದ್ದವು.
ಭೋದನೆಗಳು
ವಿಶಿಷ್ಟಾದೈತ ಸಿದ್ಧಾಂತ
- ರಾಮಾನುಜರು ವಿಶಿಷ್ಟಾದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
- ಶ್ರೀ ಅಥವಾ ಲಕ್ಷ್ಮಿ ಆರಾಧನೆಗೆ ಪ್ರಾಮುಖ್ಯತೆ ನೀಡುವುದರಿಂದ ಅವರ ಅನುಯಾಯಿಗಳನ್ನು ಶ್ರೀವೈಷ್ಣವರು ಎಂದು ಕರೆಯಲಾಗಿದೆ.
- ವಿಷ್ಣು ಸರ್ವೋಚ್ಚ ದೇವರು, ಶ್ರೀ ಲಕ್ಷ್ಮಿ ದೇವರು ಮತ್ತು ಮಾನವರ ನಡುವಿನ ಮಧ್ಯವರ್ತಿಯ ಎಂದೇ ಕರೆಯಲಾಗಿದೆ ವಿಷ್ಣುವನ್ನು ಬ್ರಹ್ಮ ಎಂದು ಕರೆದರು.
- ಶಂಕರಾಚಾರ್ಯರ ಮಾಯಾವಾದವನ್ನು ಖಂಡಿಸಿದರು ರಾಮಾನುಜರಿಗೆ ಜಗತ್ತು ಭ್ರಮೆಯಲ್ಲ ನಿಜ.
- ದೇವರಿದ್ದಾನೆ ಮತ್ತು ಪ್ರಪಂಚ ಸತ್ಯ ಅಲ್ಲದೆ ಪರಮಾತ್ಮನು ಸತ್ಯ ಸ್ವತಂತ್ರ ಮತ್ತು ಶಾಶ್ವತ ಎಂದು ಪ್ರತಿಪಾದಿಸಿದರು.
- ಆತ್ಮ (ಚಿತ್) ಮತ್ತು ಜಗತ್ತು (ಅಚಿತ್) ವಿಶ್ವವು ದೇವರ ಅಧೀನವಾಗಿದೆ.
- ಪರಮಾತ್ಮ ನಿಲ್ಲದೆ ಆತ್ಮಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ ಎಂದು ಪ್ರತಿಪಾದಿಸಿದರು.
- ರಾಮಾನುಜರು ಮೋಕ್ಷಕ್ಕೆ ಭಕ್ತಿ ಮಾರ್ಗವೇ ಪ್ರಧಾನವೆಂದು ಪ್ರತಿಪಾದಿಸಿದರು.
- ರಾಮಾನುಜರ ಭಕ್ತಿಮಾರ್ಗದಲ್ಲಿ ಎರಡು ಅಂಶಗಳಿವೆ.
- ಪ್ರಪತ್ತಿ – ದೇವರಿಗೆ ಸಂಪೂರ್ಣವಾಗಿ ಶರಣಾಗುವುದು.
- ಆಚಾರ್ಯಭಿಮಾನ – ಗುರುವಿಗೆ ಶರಣಾಗುವುದು
- ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಅಳಿಸಿ ಹಾಕಲು ಯತ್ನಿಸಿದರು.
ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.
ಜೀವನ
ಮಧ್ವಾಚಾರ್ಯ ಸಾ.ಶ.1238 ರಲ್ಲಿ ಉಡುಪಿಯ ಬಳಿಯ ಪಾಜಕ ಎಂಬಲ್ಲಿ ಜನಿಸಿದರು. ಇವರ ತಂದೆತಾಯಿಗಳು ಮಧ್ಯಗೇಹನಾರಾಯಣ ಭಟ್ಟ ಮತ್ತು ವೇದಾವತಿ. ಅವರ ಆರಂಭಿಕ ಹೆಸರು ವಾಸುದೇವ, ಅಲ್ಲದೆ ಪೂರ್ಣಪ್ರಜ್ಞ ಮತ್ತು ಅನಂದತೀರ್ಥ ಎಂತಲೂ ಕರೆಯಲಾಗುತ್ತಿತ್ತು. ಅವರು ಅದ್ಭತ ಶಿಕ್ಷಕ ಅಚ್ಯುತಪ್ರೇಕ್ಷಾ ಅವರಲ್ಲಿ ವೇದಗಳು ಮತ್ತು ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು.ತನ್ನ ಗುರುಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ ಅವರು ತಮ್ಮದೇ ಆದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು.
ಮಧ್ವಾಚಾರ್ಯರು ಉತ್ತರ ಭಾರತದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿ ಕಾಶಿ, ಬದರಿ, ಕೇದಾರ, ಹರಿದ್ವಾರ, ಗಯಾ ಇತ್ಯಾದಿಗಳಿಗೆ ಭೇಟಿ ನೀಡಿದರು. ಪ್ರವಾಸದಲ್ಲಿದ್ದಾಗ, ಅವರು ಧಾರ್ಮಿಕ ಚರ್ಚೆಗಳಲ್ಲಿ ಅನೇಕ ವಿದ್ವಾಂಸರನ್ನು ಸೋಲಿಸಿದರು. ಉಡುಪಿಗೆ ಹಿಂದಿರುಗುವಾಗ, ಅವರು ಕೃಷ್ಣ ಮತ್ತು ಬಲರಾಮನ ವಿಗ್ರಹಗಳನ್ನು ತಂದು ಉಡುಪಿಯಲ್ಲಿ ಕೃಷ್ಣನ ಹಾಗೂ ಮಲ್ಪೆಯಲ್ಲಿ ಬಲರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅವರು ಉಡುಪಿಯಲ್ಲಿ ಕೃಷ್ಣನ ಸಾಧಿಸುವುದಕ್ಕಾಗಿ ಅಷ್ಟಮಠಗಳನ್ನು ಸ್ಥಾಪಿಸಿದರು.
ಅವುಗಳೆಂದರೆ
- ಸೋದೆ ಮಠ,
- ಸಿರೂರು ಮಠ
- ಕಾಣಿಯೂರು ಮಠ
- ಪೇಜಾವರ ಮಠ
- ಪಲಿಮಾರು ಮಠ
- ಅದಮಾರು ಮಠ
- ಕೃಷ್ಣಾಪುರಮಠ
- ಪುತ್ತಿಗೆಮಠ,
ಹೀಗೆ ದಕ್ಷಿಣ ಭಾರತದ ಪವಿತ್ರ ಸ್ಥಳಗಳಾದ ಕಂಚಿ ತಂಜಾವೂರು ಶ್ರೀರಂಗಂ ಕನ್ಯಾಕುಮಾರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ದೈತಸಿದ್ಧಾಂತವನ್ನು ಪ್ರಚಾರ ಮಾಡುವುದರ ಮೂಲಕ ಕೊನೆಗೆ ಅವರು 80ನೇ ವಯಸ್ಸಿನಲ್ಲಿ ಮರಣಹೊಂದಿದರು.
ಮಧ್ವಾಚಾರ್ಯರ ಕೃತಿಗಳು:
- ಗೀತಾ ಭಾಷ್ಯ,
- ಗೀತಾತಾತ್ಪರ್ಯ ನಿರ್ಣಯ,
- ಭಾಗವತ ತಾತ್ಪರ್ಯ ನಿರ್ಣಯ,
- ಬ್ರಹ್ಮ ಸೂತ್ರ ಭಾಷ್ಯ,
- ಅನು ಭಾಷ್ಯ,
- ದ್ವಾದಶ ಸ್ತೋತ್ರ ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಮಧ್ವಾಚಾರ್ಯರ ಬೋಧನೆಗಳು
ದ್ವೈತ ಸಿದ್ಧಾಂತ
- ಮಧ್ವಾಚಾರ್ಯರು ದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
- ಶಂಕರಾಚಾರ್ಯರ ಅದೈತ ಸಿದ್ಧಾಂತವನ್ನು ಸಂಪೂರ್ಣವಾಗಿ ವಿರೋಧಿಸಿದರು.
- ಮಧ್ವಾಚಾರ್ಯರ ಪ್ರಕಾರ ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ ಬೇರೆ ಎಂದು ಪ್ರತಿಪಾದಿಸಿದರು.
- ದೇವರು ಸ್ವತಂತ್ರ ಜೀವಾತ್ಮ ಮತ್ತು ಪ್ರಪಂಚ ಪರಮಾತ್ಮನ ಅಧೀನ ಎಂದು ಪ್ರತಿಪಾದಿಸಿದರು.
- ಅವರು ಆತ್ಮ, ವಸ್ತು ಮತ್ತು ದೇವರ ನಡುವಿನ 5 ಮೂಲಭೂತ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ.
ಅವುಗಳೆಂದರೆ:
- ಆತ್ಮ ಮತ್ತು ಪರಮಾತ್ಮ ಒಂದರೊಳಗೊಂದು ವಿಲೀನಗೊಳ್ಳುವುದಿಲ್ಲ.
- ಆತ್ಮ ಇನ್ನೊಂದು ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಪರಮಾತ್ಮನೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಇನ್ನೊಂದು ಜಡ ಪ್ರಪಂಚದೊಂದಿಗೆ ವಿಲೀನಗೊಳ್ಳುವುದಿಲ್ಲ.
ಮಧ್ವಾಚಾರ್ಯರು ಭಕ್ತಿ ಮಾರ್ಗವನ್ನು ಒತ್ತಿ ಹೇಳಿದರು. ಅವರ ಪ್ರಕಾರ, ಶುದ್ಧ ಪ್ರೀತಿ, ಸಂಪೂರ್ಣ ಭಕ್ತಿ ಮತ್ತು ದೇವರ ಇಚ್ಛೆಗೆ ಸಂಪೂರ್ಣ ಸ್ವಯಂ ಶರಣಾಗತಿಯ ಮಾರ್ಗವು ದೇವರ ಅನುಗ್ರಹ ಅಥವಾ ಮೋಕ್ಷವನ್ನು ಸಾಧಿಸಲು ನಿಜವಾದ ಮಾರ್ಗವಾಗಿದೆ. ಎಂದು ಪ್ರತಿಪಾದಿಸಿದರು.
ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಕುರಿತು ವಿಷಾದಿಕರಿಸಿ.
ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು
ದ್ವೈತ ಸಿದ್ಧಾಂತದ ಪ್ರಮುಖ ತತ್ರಗಳು
- ವಿಷ್ಣು ಪೂಜೆಗೆ ಆದ್ಯತೆ ನೀಡಿದರು.
- ವಿಷ್ಣುವೆ ನರ್ವೋತ್ತಮನು ಎಂದರು ಆತ ಸಚ್ಚಿದಾನಂದ ಸಕಲ ಜ್ಞಾನ ಪರಿಪೂರ್ಣನು ಎಂದು ವಾದಿಸಿದರು.
- ಮಧ್ವಾಚಾರ್ಯರ ಪ್ರಕಾರ ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ ಬೇರೆ ಎಂದು ಪ್ರತಿಪಾದಿಸಿದರು.
- ದೇವರು ಸ್ವತಂತ್ರ ಜೀವಾತ್ಮ ಮತ್ತು ಪ್ರಪಂಚ ಪರಮಾತ್ಮನ ಅಧೀನ ಎಂದು ಪ್ರತಿಪಾದಿಸಿದರು.
ದ್ವೈತ ಸಿದ್ಧಾಂತದ ಪಂಚಭೇದಗಳು
- ಆತ್ಮ ಮತ್ತು ಪರಮಾತ್ಮ ಒಂದರೊಳಗೊಂದು ವಿಲೀನಗೊಳ್ಳುವುದಿಲ್ಲ.
- ಆತ್ಮ ಇನ್ನೊಂದು ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಪರಮಾತ್ಮನೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ.
- ಜಡಪ್ರಪಂಚ ಇನ್ನೊಂದು ಜಡ ಪ್ರಪಂಚದೊಂದಿಗೆ ವಿಲೀನಗೊಳ್ಳುವುದಿಲ್ಲ.
ದ್ವೈತ ಸಿದ್ಧಾಂತದಲ್ಲಿ ನವರತ್ನಗಳು
- ಹರಿಯೇ ಪರಬ್ರಹ್ಮನು
- ಜಗತ್ತು ಸತ್ಯವಾದದ್ದು
- ಜೀವಾತ್ಮ ಪರಮಾತ್ಮರ ನಡುವೆ ಭೇದವಿದೆ
- ಜೀವಾತ್ಮರು ಪರಮಾತ್ಮನ ಸೇವಕರು
- ಮುಕ್ತಿ ಪಡೆಯಲು ನಿರ್ಮಲವಾದ ಭಕ್ತಿ ಅಗತ್ಯವಾದುದು
- ಜೀವಾತ್ಮ ಪರಮಾತ್ಮರಲ್ಲಿ ತಾರತಮ್ಯವಿದೆ
- ಸ್ವರೂಪ ಸುಖದ ಅನುಭವವೇ ಮುಕ್ತಿ
- ಪ್ರತ್ಯಕ್ಷ ಅನುಮಾನ ಆಗಮಗಳೆಂಬ ಮೂರು ಪ್ರಮಾಣಗಳು ಇವಗ್ ಜ್ಞಾನಕ್ಕೆ ಸಹಕಾರಿ
- ಶ್ರೀ ಹರಿಯೇ ಎಲ್ಲಾ ವೇದಗಳಲ್ಲಿ ಉಪನಿಷತ್ ವರ್ಣಿಸಿದ ಮುಖ್ಯ ದೇವರು ಆತ ಪರಮ ಸತ್ಯನು.
ರಾಮಾನುಜಾಚಾರ್ಯರ ವಿಶಿಷ್ಟಾದ್ವತ ಸಿದ್ಧಾಂತದ ಬಗ್ಗೆ ವಿಶ್ಲೇಷಿಸಿ.
- ಶಂಕರಾಚಾರ್ಯರ ಮಾಯಾವಾದವನ್ನು ಖಂಡಿಸಿದರು ರಾಮಾನುಜರಿಗೆ ಜಗತ್ತು ಭ್ರಮೆಯಲ್ಲ ನಿಜ.
- ದೇವರಿದ್ದಾನೆ ಮತ್ತು ಪ್ರಪಂಚ ಸತ್ಯ ಅಲ್ಲದೆ ಪರಮಾತ್ಮನು ಸತ್ಯ ಸ್ವತಂತ್ರ ಮತ್ತು ಶಾಶ್ವತ ಎಂದು ಪ್ರತಿಪಾದಿಸಿದರು.
- ಆತ್ಮ (ಚಿತ್) ಮತ್ತು ಜಗತ್ತು (ಅಚಿತ್) ವಿಶ್ವವು ದೇವರ ಅಧೀನವಾಗಿದೆ.
- ಪರಮಾತ್ಮ ನಿಲ್ಲದೆ ಆತ್ಮಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ ಎಂದು ಪ್ರತಿಪಾದಿಸಿದರು.
- ರಾಮಾನುಜರು ಮೋಕ್ಷಕ್ಕೆ ಭಕ್ತಿ ಮಾರ್ಗವೇ ಪ್ರಧಾನವೆಂದು ಪ್ರತಿಪಾದಿಸಿದರು.
- ರಾಮಾನುಜರ ಭಕ್ತಿಮಾರ್ಗದಲ್ಲಿ ಎರಡು ಅಂಶಗಳಿವೆ.
- ಪ್ರಪತ್ತಿ – ದೇವರಿಗೆ ಸಂಪೂರ್ಣವಾಗಿ ಶರಣಾಗುವುದು.
- ಆಚಾರ್ಯಭಿಮಾನ – ಗುರುವಿಗೆ ಶರಣಾಗುವುದು.
- ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಅಳಿಸಿ ಹಾಕಲು ಯತ್ನಿಸಿದರು.
- ಎಲ್ಲಾ ವರ್ಗದ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿದರು.
- ಅಸ್ಪೃಶ್ಯರನ್ನು ತಿರುಕುಲತ್ತಾರ್ ಅಥವಾ ಶ್ರೀಹರಿಯ ವಂಶಸ್ಥರೆಂದು ಕರೆದರು.
- ರಾಮಾನುಜಾಚಾರ್ಯರು ವಿಶಿಷ್ಟಾದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು
- ರಾಮಾನುಜಾಚಾರ್ಯರ ಪ್ರಕಾರ ಜೀವನ ವ್ಯಕ್ತಿತ್ವವು ಮೋಕ್ಷದ ಅನಂತರವು ಉಳಿಯುತ್ತದೆ.
- ಶಂಕರಾಚಾರ್ಯರು ಮುಕ್ತಿ ಸಾಧನೆಗೆ ಜ್ಞಾನಮಾರ್ಗ ತೋರಿದರೆ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ತೋರಿಸಿದರು.
ರಾಮಾನುಜಾಚಾರ್ಯರು ಮುಕ್ತಿ ಸಾಧನೆಗೆ ಬೋಧಿಸಿದ ಪ್ರಪತ್ತಿ ಯ ಆರು ಹಂತಗಳು.
- ದೇವರು ಇಚ್ಚಿನಂತೆ ಆಲೋಚಿಸುವುದು ಹಾಗೂ ವರ್ತಿಸುವುದು.
- ದೇವರು ಮೆಚ್ಚದ ಹಾಗೆ ಯೋಚಿಸದೆ ಇರುವುದು.
- ದೇವರು ರಕ್ಷಿಸುತ್ತಾನೆ ಎಂದು ನಂಬುವುದು.
- ಕಾಪಾಡು ಎಂದು ದೇವರಲ್ಲಿ ಮೊರೆ ಇಡುವುದು.
- ಭಗವಂತನಿಗೆ ಸಂಪೂರ್ಣವಾಗಿ ಶರಣಾಗುವುದು.
- ಭಗವಂತನನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದೇನೆ ಎಂದು ಭಾವಿಸುವುದು.
ರಾಮಾನುಜಾಚಾರ್ಯರು ಬೋಧಿಸಿದ ಈಶ್ವರನ ಐದು ರೂಪಗಳು
- ಪರನಾರಾಯಣ
- ವಾಸುದೇವ
- ಚತುರ್ವಿಹನು
- ಅಂತರ್ಯಾಮಿ
- ಆಚಾರ್ಯ ರೂಪ
ವಚನ ಸಾಹಿತ್ಯದ ಬಗ್ಗೆ ಟಿಪ್ಪಣಿ ಬರೆಯಿರಿ.
ಪೀಠಿಕೆ : ವಚನ ಎಂದರೆ ಮಾತು ಎಂದರ್ಥ ನಾವಾಡುವ ಮಾತು ಗದ್ಯದಲ್ಲಿರುತ್ತದೆ, ಚಂಪು ಕಾವ್ಯಗಳಲ್ಲಿ ಅಲ್ಲಲ್ಲಿ ಬಳಸುತ್ತಿದ್ದ ಗದ್ಯವನ್ನು ವಚನವೆಂದೆ ಕರೆಯುತ್ತಿದ್ದರು
ವಚನ ಸಾಹಿತ್ಯದ ಲಕ್ಷಣಗಳು
- ರಾಜ್ಯಶ್ರೀಯ ಮತ್ತು ರಾಜರ ನಿಷ್ಠೆಯ ಅಂದನ್ನು ವಿರೋಧಿಸಿತು.
- ವಚನ ರೂಪಾ ರಚನೆಯು ಸರಳವಾದ ಸುಲಭವಾಗಿ ಆಡು ಭಾಷೆಯಲ್ಲಿತ್ತು.
- ಅನುಭವದ ಗಾಡ ಸೂಕ್ಷ್ಮತೆಯೊಡನೆ ಉಕ್ತಿಯ ಸಹಜತೆ ಅಲಂಕಾರ ರಮ್ಯತೆ.
- ಇಷ್ಟದೇವತೆಯ ಎದುರಿನಲ್ಲಿ ಭಕ್ತಿ ನಂಬರ ವಾದ ವಿಶಿಷ್ಟತೆ.
- ಸ್ವಂತದ ಕಾಯಕಗಳಿಗೆ ಅನುಗುಣವಾದ ಹೋಲಿಕೆಗಳಿಂದ ಪರಮಾಂತದ ವಿವರಣೆ.
- ವಚನಕಾರರು ತಮಗೆ ಅನಿಸಿದ್ದನ್ನು ನೇರವಾಗಿ ಸರಳವಾಗಿ ಮಾತನಾಡಿದಂತೆ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ತಿಳಿಸಿಕೊಟ್ಟರು.
- ಲಿಂಗ ಭೇದವಿಲ್ಲದೆ ಸಾಹಿತ್ಯ ಅಭಿವ್ಯಕ್ತಿಯಲ್ಲಿ ಶ್ರೀ ಪುರುಷರ ಪಾಲ್ಗೊಳ್ಳುವಿಕೆ ಕನ್ನಡ ಸಾಹಿತ್ಯದಲ್ಲಿ ಇದೆ ಮೊದಲು.
- ಪ್ರತಿಯೊಂದು ವಚನದ ಕೊನೆಯಲ್ಲಿ ಸಂಭೋಧನಾ ರೂಪದ ಅಂಕಿತನಾಮಗಳಿರುವುದು ವಚನಗಳ ಮತ್ತೊಂದು ವೈಶಿಷ್ಟ್ಯ
- ಮಾರ್ಗದೇಶಿಗಳ ಸಮನ್ವಯ ಪ್ರಯೋಗ
- ಸಮಾಜ ವಿಡಂಬನೆ ವಚನಗಳ ಮತ್ತೊಂದು ವೈಶಿಷ್ಟ
- ವಚನಗಳಲ್ಲಿ ಕಾವ್ಯದೃಷ್ಟಾಂತಗಳ ಚಿತ್ರಣ ತುಂಬಾ ಸೊಗಸಾಗಿದ್ದು ಬಹು ರಮ್ಯವಾದುದ್ದಾಗಿದೆ .
ಬಸವಣ್ಣನವರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.
ಪೀಠಿಕೆ : ಗುರು ಬಸವ ಅಥವಾ ಬಸವೇಶ್ವರ ಒಬ್ಬ ದಾರ್ಶನಿಕ ಮತ್ತು ಸಮಾಜ ಸುಧಾರಕ. ಅವರು ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ಮತ್ತು ಆಚರಣೆಗಳ ವಿರುದ್ಧ ಹೋರಾಡಿದರು. ಅವರನ್ನು ವಿಶ್ವ ಗುರು ಮತ್ತು ಭಕ್ತಿ ಭಂಡಾರಿ ಎಂದೂ ಕರೆಯುತ್ತಾರೆ. ಅವರ ಬೋಧನೆಗಳು ಮತ್ತು ಉಪದೇಶಗಳು ಎಲ್ಲಾ ಮಿತಿಗಳನ್ನು ಮೀರಿವೆ ಮತ್ತು ಸಾರ್ವತ್ರಿಕ ಮತ್ತು ಶಾಶ್ವತವಾಗಿವೆ. ಅವರು ಮಹಾನ್ ಮಾನವರಾಗಿದ್ದರು.
ಮೂಲಾಧಾರಗಳು
- ಬಸವಣ್ಣನವರ ಜೀವನವನ್ನಾಧರಿಸಿದ ಪ್ರಮುಖ ಕೃತಿಗಳು
- ಬಸವ ಪುರಾಣಮು (ತೆಲುಗು) – ಪಾಲ್ಕುರಿಕೆ ಸೋಮನಾಥ
- ಬಸವ ಪುರಾಣ (ಕನ್ನಡ) – ಭೀಮಕವಿ
- ಬಸವರಾಜದೇವರ ರಗಳೆ (ಕನ್ನಡ) – ಹರಿಹರ
ಬಸವನ ಆರಂಭಿಕ ಜೀವನ :
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ತಂದೆ- ಶ್ರೀ ಮಾದರಸ ಮತ್ತು ತಾಯಿ-ಮಾದಲಾಂಬಿಕೆ ಮಗನಾಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಗುರು ಬಸವಣ್ಣನವರು ಕಟ್ಟುನಿಟ್ಟಾದ ಧಾರ್ಮಿಕ ಮನೆತನದಲ್ಲಿ ಬೆಳೆದರು. ಅಲ್ಲಿ ಜನಿವಾರ ಎಂಬ ಪವಿತ್ರ ದಾರವನ್ನು ಧರಿಸಲಾಯಿತು ಅವರು ಜನಿವಾರವನ್ನು ಸ್ವೀಕರಿಸಲಿಲ್ಲ. ಅವರು ಧರ್ಮದ ಆಧಾರದ ಮೇಲೆ ಆಗಮಗಳನ್ನು ತಿರಸ್ಕರಿಸಿದರು.
ಅವರು ಚಿಕ್ಕ ವಯಸ್ಸಿನಲ್ಲಿ ವೇದ, ವ್ಯಾಕರಣ ಮತ್ತು ತರ್ಕಶಾಸ್ತ್ರವನ್ನು ಅಧ್ಯಯನ ಮಾಡಿದರು. 8 ನೇ ವಯಸ್ಸಿನಲ್ಲಿ ಅವರು ತಮ್ಮ ಜನ್ಮದಲ್ಲಿ ಲಿಂಗದೀಕ್ಷೆಯನ್ನು ಹೊಂದಿದ್ದರು ಮತ್ತು ಆದ್ದರಿಂದ ಉಪನಯನದ ಅಗತ್ಯವಿಲ್ಲ ಎಂದು ತಮ್ಮ ಪವಿತ್ರ ದಾರವನ್ನು ತೆಗೆದುಹಾಕಿದರು. ನಂತರ ಅವರು ಕೂಡಲಸಂಗಮಕ್ಕೆ ಹೋದರು. ಅಲ್ಲಿ ಅವರು ಜಾತವೇದಮುನಿಯವರಲ್ಲಿ ಅಧ್ಯಯನ ಮಾಡಿದರು. 12 ವರ್ಷಗಳ ಕಾಲ ಕೂಡಲ ಸಂಗಮದಲ್ಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಅಕ್ಕ : ನಾಗಮ್ಮ ಭಾವ : ಶಿವಸ್ವಾಮಿ
ಬಸವಣ್ಣನವರ ಹೆಂಡತಿಯರ ಹೆಸರು : ನೀಲಾಂಬಿಕೆ ಮತ್ತು ಗಂಗಾಂಬಿಕೆ
ಧಾರ್ಮಿಕ ಚಟುವಟಿಕೆಗಳು :
ಅವರು ಬಾಗೇವಾಡಿಯನ್ನು ತೊರೆದರು ಮತ್ತು ನಂತರದ 12 ವರ್ಷಗಳ ಕಾಲ ಕೂಡಲ ಸಂಗಮದ
ಅಂದಿನ ಶೈವ ಭದ್ರಕೋಟೆಯಾದ ಸಂಗಮೇಶ್ವರದಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ವಿದ್ವಾಂಸರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಸಾಮಾಜಿಕ ತಿಳುವಳಿಕೆಯ ಸಹಕಾರದಲ್ಲಿ ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಚಾರಗಳನ್ನು ಅಭಿವೃದ್ಧಿಪಡಿಸಿದರು. ಈಶಾನ್ಯ ಗುರು ಎಂದೂ ಕರೆಯಲ್ಪಡುವ ಜಾತವೇದ ಮುನಿಯು ಅವರಿಗೆ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದರು. ಬಸವಣ್ಣ ಇಷ್ಟಲಿಂಗವನ್ನು ಕಂಡುಹಿಡಿದರು ಮತ್ತು ಲಿಂಗಾಯತ ಧರ್ಮದ ಸ್ಥಾಪಕ ಮತ್ತು ಮೊದಲ ಪ್ರವಾದಿಯಾದರು.
ಕರಣಿಕನಾಗಿ ಕಾರ್ಯ :
ಕಳಚುರಿ ರಾಜ ಬಿಜ್ಜಳನು ಬಸವಣ್ಣನವರನ್ನು ಕರಣಿಕನನ್ನಾಗಿ ನೇಮಿಸಿದನು. ಬಸವೇಶ್ವರರು ನೀಲಾಂಬಿಕೆ ಮತ್ತು ಗಂಗಾಂಬಿಕೆಯನ್ನು ವಿವಾಹವಾದರು. ಅಧಿಕಾರ, ಐಶ್ವರ್ಯ, ಲೌಕಿಕ ಬದುಕಿನ ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕ ಸೇವೆಯ ಮೂಲಕ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಶಕ್ತಿ ವಿಶಿಷ್ಠಾದೈತ ತತ್ತ್ವ:
ಬಸವ ಪ್ರತಿಪಾದಿಸಿದ ಶಕ್ತಿ ವಿಶಿಷ್ಟಾದೈತ ತತ್ವ ಅವರು ಲಿಂಗ ಪೂಜೆಗೆ ಪ್ರಾಧಾನ್ಯತೆ ನೀಡಿದರು. ಅಲ್ಲದೆ ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಇಷ್ಟಲಿಂಗ ಧರಿಸಲು ಅವಕಾಶ ಕಲ್ಪಿಸಿದರು. ಹೀಗೆ ಲಿಂಗವನ್ನು ಧರಿಸಿದವರನ್ನು ಲಿಂಗಾಯತ ಎಂದು ಕರೆಯಲಾಯಿತು. ಧರ್ಮವು ಶಿವನ ಆರಾಧನೆಗೆ ಅವಕಾಶವನ್ನು ನೀಡುತ್ತದೆ ಮತ್ತು ಇದರಲ್ಲಿ ಲಿಂಗ (ದೇವರು) ಮತ್ತು ಅಂಗ (ವ್ಯಕ್ತಿ ಆತ್ಮ) ಎರಡು ವಿಭಾಗಗಳಾಗಿವೆ. ಮೋಕ್ಷವೆಂದರೆ ಲಿಂಗದೊಂದಿಗೆ ಏಕತೆಯನ್ನು ಸಾಧಿಸುವುದು. ಬಸವನ ತತ್ತ್ವಶಾಸ್ತ್ರದ ಆಧಾರದಿಂದ ಶಿವ ಶಕ್ತಿಯೊಂದಿಗೆ (ಪ್ರಕೃತಿ) ವಿಲೀನ, ಪುರುಷ ಮತ್ತು ಪ್ರಕೃತಿ ಪರಸ್ಪರ ಸಮ್ಮಿಲನವಿಲ್ಲದೆ ಅಪೂರ್ಣ. ಇದನ್ನು ” ಶಕ್ತಿ ವಿಶಿಷ್ಟಾದ್ವತ ತತ್ವಶಾಸ್ತ್ರ ಎಂದು ಕರೆಯಲಾಗುತ್ತದೆ’.
ಅನುಭವ ಮಂಟಪ : ಬಸವ ಕಲ್ಯಾಣದಲ್ಲಿ “ಅನುಭವ ಮಂಟಪ” ಸ್ಥಾಪಿಸಿ ತನ್ನ ತತ್ತ್ವಜ್ಞಾನವನ್ನು ಪಸರಿಸಿದರು.
ವಚನಗಾರನಾಗಿ ಬಸವಣ್ಣ : ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ
ಅಂಕಿತನಾಮ : ಕೂಡಲಸಂಗಮ ದೇವರು ಅವರ ಕಾವ್ಯನಾಮವಾಗಿದೆ.
ಬಸವಣ್ಣನವರ ವಚನಗಳು :
- “ಮಾನವ ಜನ್ಮ ದೊಡ್ಡದಲ್ಲಾ, ಮಾನವೀಯತೆ ದೊಡ್ಡದು. ಧರ್ಮ ದೊಡ್ಡದಲ್ಲಾ.. ದಯೆ ದೊಡ್ಡದು.”
- “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ ಕೂಡಲಸಂಗಮದೇವ ಎನಗಿದೆ
- ‘ಜ್ಞಾನದಿಂದ ಅಧಿಕಾರ ಸಿಬಹುದು, ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೇ ಬೇಕು.”
- “ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ’.
ಕಲ್ಯಾಣದ ದಂಗೆ:
ಬಸವೇಶ್ವರರ ಧಾರ್ಮಿಕ ಕಾರ್ಯಗಳನ್ನು ನೋಡುತ್ತಿರುವ ಸಂಪ್ರದಾಯಸ್ಥರು ಬಿಜ್ಜಳನಿಗೆ ಖಜಾನೆಯಿಂದ ಬಂದ ಹಣವನ್ನು ಬಳಸುತ್ತಿದ್ದಾರೆ ಮತ್ತು ಹಿಂದೂ ಧರ್ಮವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಸಾಂಪ್ರದಾಯಿಕ ಜನರನ್ನು ಸಮಾಧಾನಪಡಿಸಲು ಬಿಜ್ಜಳ ಮಧುವಯ್ಯ ಮತ್ತು ಹರಳಯ್ಯನಿಗೆ ಮರಣದಂಡನೆ ವಿಧಿಸಿದನು. ಅಲ್ಲದೆ ನವದಂಪತಿಯನ್ನು ಕುರುಡರನ್ನಾಗಿಸಿದರು. ಇದರಿಂದ ಅಸಮಾಧಾನಗೊಂಡ ಬಸವ ಸಚಿವ ಸ್ಥಾನ ತ್ಯಜಿಸಿ ಕೂಡಲಸಂಗಮಕ್ಕೆ ತೆರಳಿದರು. ಇದು ಕಲ್ಯಾಣದಲ್ಲಿ ದಂಗೆಗೆ ಕಾರಣವಾಯಿತು. ಈ ದಂಗೆಯಲ್ಲಿ ಬಿಜ್ಜಳನ ಕೊಲೆಯಾಯಿತು.
ನಿಧನ : ಬಸವಣ್ಣ 1196 ರಲ್ಲಿ ಕೂಡಲ ಸಂಗಮದಲ್ಲಿ ನಿಧನ ಹೊಂದಿದ್ದರು.
ಉಪಸಂಹಾರ: ಬಿಜ್ಜಳ ಬಸವಣ್ಣನವರ ಕೆಚ್ಚೆದೆಯಿಂದ ಸಮಾಜ ಸುಧಾರಣೆಗೆ ಸಹಕರಿಸಿದ್ದರೆ ಕರ್ನಾಟಕದಲ್ಲಿ ಜಾತಿ ಪದ್ದತಿ ಸಂಪೂರ್ಣ ನಿರ್ಮೂಲನೆಯಾಗುತ್ತಿತ್ತು. ಬಸವಣ್ಣನವರ ಜೊತೆಯಲ್ಲಿ ಬಿಜ್ಜಳನ ಹೆಸರು ಇತಿಹಾಸದಲ್ಲಿ ದಾಖಲಾಗುತ್ತಿತ್ತು. ಒಂದಿಷ್ಟು ಜನರ ನಡತೆ ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದರೆ ಕರ್ನಾಟಕ ಇಡೀ ದೇಶದಲ್ಲೇ ಜಾತಿ ಭೇದವಿಲ್ಲದೆ ಮಾದರಿ ರಾಜ್ಯವಾಗುತ್ತಿತ್ತು.
ಅನುಭವ ಮಂಟಪದ ಬಗ್ಗೆ ಟಿಪ್ಪಣಿ ಬರೆಯಿರಿ.
- ಬಸವ ಕಲ್ಯಾಣದಲ್ಲಿ “ಅನುಭವ ಮಂಟಪ’ ಸ್ಥಾಪಿಸಿ ತನ್ನ ತತ್ತ್ವಜ್ಞಾನವನ್ನು ಪಸರಿಸಿದರು.
- ಇದನ್ನು ವಚನಮಂಟಪ ಎನ್ನುತ್ತಾರೆ.
- ಇಲ್ಲಿ ಧಾರ್ಮಿಕ ಪ್ರವಚನಗಳು ನಡೆದವು ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಚರ್ಚಿಸಲಾಯಿತು.
- ಅಲ್ಲಮಪ್ರಭು ಈ ಧಾರ್ಮಿಕ ಪ್ರವಚನಗಳ ಅಧ್ಯಕ್ಷತೆ ವಹಿಸಿದ್ದರು.
- ವೀರಶೈವ ಧರ್ಮದ ತತ್ವಗಳನ್ನು ಜನರಿಗೆ ತಿಳಿಸುವುದು ಮತ್ತು ಅದರ ಪ್ರಚಾರ ಅವರ ಮಹತ್ವದ ಉದ್ದೇಶವಾಗಿತ್ತು.
- ವೀರಶೈವ ಧರ್ಮವು ಖಚಿತ ರೂಪ ತಾಳಿದ್ದು ಇದೇ ಅನುಭವ ಮಂಟಪದಲ್ಲಿ
- ಇಲ್ಲಿ ಜಾತಿ ಧರ್ಮ ವರ್ಗ ವರ್ಣ ಗಂಡು, ಹೆಣ್ಣೆಂಬ ಭೇದವಿಲ್ಲದೆ ಎಲ್ಲಾ ಅನುಭವಿಗಳು ಸೇರಿದರು.
- ಇಲ್ಲಿರುವ ಪ್ರಮುಖ ವಚನಕಾರರೆಂದರೆ ಚೆನ್ನಬಸವ ಸಿದ್ದರಾಮ ಮಾದರ ಧೂಳಯ್ಯ ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ ವಲಯ ಮಾದಿಗರ ಚೆನ್ನಯ್ಯ ನುಲಿಯ ಚಂದಯ್ಯ ಮೇದಾರ ಕೇತಯ್ಯ ನಾಗಲಾಂಬಿಕೆ ಸತ್ಯಕ್ಕೆ ಮುಕ್ತಾಯಕ್ಕ ಮೊದಲಾದವರು.
- ಅನುಭವ ಮಂಟಪದಿಂದಾಗಿ ಬಸವಣ್ಣನವರ ಖ್ಯಾತಿ ಹೆಚ್ಚಾದಂತೆ ಕಲ್ಯಾಣ ಭಾರತದ ಬಹುದೊಡ್ಡ ಸಾಂಸ್ಕೃ ತಿಕ ಕೇಂದ್ರವಾಗಿ ಹಾಗೂ ಯಾತ್ರಾಸ್ಥಳವಾಗಿ ಮಾರ್ಪಟ್ಟಿತು.
ವಚನ ಸಾಹಿತ್ಯದ ಬೆಳವಣಿಗೆಯಲ್ಲಿ ಅಕ್ಕಮಹಾದೇವಿ ವಚನಗಳ ಮಹತ್ವವನ್ನು ವಿವರಿಸಿ.
ಪೀಠಿಕೆ : 12ನೇ ಶತಮಾನದಲ್ಲಿ ಕರ್ನಾಟಕದ ವಚನ ಸಾಹಿತ್ಯದಲ್ಲಿ ಬಸವಣ್ಣನಂತ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದ ಅಕ್ಕ ಮಹಾದೇವಿ ವೀರಶೈವ ಧರ್ಮಕ್ಕೆ ಸೇರಿದ ಪ್ರಸಿದ್ದ ಮಹಿಳಾ. ಕನ್ನಡ ಗದ್ಯದಲ್ಲಿ ಅವರ ಪದಗಳು ಭಕ್ತಿ ಕಾವ್ಯಕ್ಕೆ ಅತ್ಯುನ್ನತ ಕೊಡುಗೆ ಎಂದು ಪರಿಗಣಿಸಲಾಗಿದೆ.
ಶ್ರೀವನ : ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬ ಗ್ರಾಮದಲ್ಲಿ ತಂದೆ ನಿರ್ಮಲಾ ಶೆಟ್ಟಿ ಮತ್ತು ತಾಯಿ ಸುಮತಿ ಎಂಬ ಶೈವ ಪರಂಪರೆಯ ಅನುಭವಿ ದಂಪತಿಗಳ ಮಗಳಾಗಿ ಜನಿಸಿದರು.
ವಿವಾಹ: ಉಡುತಡಿಯ ರಾಜನಾಗಿರುವ ಕೌಶಿಕ ಮಹಾರಾಜ ನೊಂದಿಗೆ ವಿವಾಹವಾಯಿತು
ಗಂಡನನ್ನು ತೊರೆದಿದ್ದು : ಅಕ್ಕಮಹಾದೇವಿಯ ಲಿಂಗ ಪೂಜೆಗೆ ತೊಂದರೆಯನ್ನು ಉಂಟು ಮಾಡಿದ ತನ್ನ ಲೌಕಿಕ ಗಂಡನಾಗಿರುವ ಕೌಶಿಕನನ್ನ ಬಿಟ್ಟು ಅರಮನೆಯಿಂದ ಹೊರ ಬಂದಳು.
ವಚನ ಸಾಹಿತ್ಯದ ಬೆಳವಣಿಗೆಯಲ್ಲಿ ಅಕ್ಕಮಹಾದೇವಿಯ ಪಾತ್ರ
- ಅಕ್ಕಮಹಾದೇವಿ ಅವರು ಶ್ರೇಷ್ಠ ವಚನಕಾರ್ತಿ ಕವಿಯತ್ರಿ ಅವರು ಸುಮಾರು 434 ವಚನಗಳನ್ನು ರಚಿಸಿದ್ದಾರೆ ಇದರ ಜೊತೆಗೆ 67 ತ್ರಿಪದಿಗಳನ್ನು ಒಳಗೊಂಡ ಯೋಗಾಂಗ ತ್ರಿಪಾದಿ ಎಂಬ ಕೃತಿಯನ್ನು ರಚಿಸಿದ್ದಾರೆ.
- ತನ್ನ ಕೃತಿಯಲ್ಲಿ ಆಧ್ಯಾತ್ಮಿಕ ಹಾಗೂ ಶೃಂಗಾರಗಳನ್ನು ಸಮನ್ವಯಗೊಳಿಸಿ ನೋವು ನಲಿವು ವೈರಾಗ್ಯ ವಿರಕ್ತಿ ಮುಂತಾದ ಅಂಶಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ.
- ಅಕ್ಕಮಹಾದೇವಿಯ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನವಾಗಿದೆ.
- ತನ್ನ ಮಾನಸಿಕ ತುಮುಲುಗಳನ್ನು “ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೇನವ್ವ ನೀರಿಲ್ಲದ ಗಾಯದಲ್ಲಿ ನೊಂದೆನವ್ವ” ಎಂಬ ವಚನದಲ್ಲಿ ವಿವರಿಸಿದ್ದಾಳೆ.
- ಸಂಸಾರದ ಯಹ ವಿಕಲ ವ್ಯವಸ್ಥೆಯ ತನ್ನ ದೀನ ಸ್ಥಿತಿ ಯಾದದ್ದನ್ನು ಕುರಿತು ” ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನ ಸುತ್ತಿ ಸಾವತರವನಂತೆ ಮನ ಬಂದುದು ಬಯಸಿ ಬೇವುತ್ತಿದ್ದೆನಯ್ಯ” ಎಂಬ ವಚನದಲ್ಲಿ ವಿವರಿಸಿದ್ದಾಳೆ.
- ತನ್ನ ಲೋಕಪತಿ ಮಲ್ಲಿಕಾರ್ಜುನನನ್ನು ಹುಡುಕುವಲ್ಲಿ ಅನುಭವಿಸಿದ ವಿಕಟ ಯಾತನೆ ನೋವು ವಿರಹ ವೇದನೆಗಳ ಅಗರ ಹೃದಯ ವಿಗ್ರಹಕವಾದುದು ” ಅಳಿ ಸಂಕುಲವೇ ಮಾಮರವೇ ಬೆಳದಿಂಗಳೇ ಕೋಗಿಲೆ ನಿಮ್ಮೆಲ್ಲರನ್ನು ಒಂದು ಬೇಡುವೆನು ಎನ್ನೊಡೆಯ ಚೆನ್ನಿ ಮಲ್ಲಕಾರ್ಜುನ ದೇವರ ಕಂಡರೆ ಕರೆದು ತೋರಿರಿ ಎಂಬ ವಚನದಲ್ಲಿ ಕಾಣಬಹುದು.
-
” ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆದಂತಯ್ಯ….. ಎಂಬ ವಚನದಲ್ಲಿ ಮಾನವನು ಸಮಾಜದಲ್ಲಿ ಎಂತಹ ಕಾಠಿಣ್ಯ ಪರಿಸ್ಥಿತಿ ಒದಗಿದರು ಆ ಗಂಡಾಂತರಗಳನ್ನು ನಿಭಾಯಿಸುವ ಧೈರ್ಯ ಧೈರ್ಯ ಮಾನವರಲ್ಲಿ ಬರಬೇಕೆಂದು ವಿರೋಧಾರ್ಥವಾಗಿ ಹೇಳಿಕೆಯಾಗಿದೆ.
-
ಅಂದಿನ ಸಾಮಾಜಿಕ ವ್ಯವಸ್ಥೆ ಮತ್ತು ರಾಜ್ಯ ಪ್ರಭುತ್ವಗಳನ್ನೆರಡು ಧಿಕ್ಕರಿಸಿ ಜೀವನಪೂರ್ತಿ ಹೋರಾಡಿ ವಚನ ಸಾಹಿತ್ಯಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾಳೆ.
-
ಲಿಂಗಂಗ ಸಾಮರಸ್ಯವೇ ಅಕ್ಕನ ಜೀವನದ ಗುರಿ ಅದನ್ನು ಸಾಧಿಸಲು ಅವಳು ಹಿಡಿದ ಮಾರ್ಗ ವೈರಾಗ್ಯ.
-
ವಿಶ್ವದ ಚೈತನ್ಯ ಮೂರ್ತಿಯಲ್ಲಿ ವಿಲೀನಗೊಳ್ಳಲು ಶರಣ ಸತಿ ಲಿಂಗಪತಿ ತತ್ವವೇ ತಾರಕ
ಪರಮಾತ್ಮನ ನಿಲುವನ್ನು ಅರಿಯುವಲ್ಲಿ ಇರುವ ತುಣುಕುಗಳನ್ನು ಕಿತ್ತುಗೆಯಬೇಕಾದದು ಸಾಧಕನ ಮೊದಲ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದ್ದಾಳೆ.
ವಚನ ಸಾಹಿತ್ಯ ಬೆಳವಣಿಗೆಯಲ್ಲಿ ಅಲ್ಲಮಪ್ರಭು ವಚನಗಳ ಮಹತ್ವ ತಿಳಿಸಿ.
ಪೀಠಿಕೆ : ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು.
ಜೀವನ :
ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪೂರ ತಾಲೂಕಿನ ಬಳಿಗಾವೆ ಎಂಬಲ್ಲಿ ಒಂದು ರಾಜಿ ಮನೆತನದಲ್ಲಿ ಜನಿಸಿದರು. ಅಲ್ಲಮಪ್ರಭು ತಾವು ಯುವಕರಿದ್ದಾಗ ಕಾಮಲತೆ ಎಂಬ ಯುವತಿ ಯನ್ನು ಮದುವೆಯಾದರು ಆದರೆ ಅವರು ಅಕಾಲಿಕವಾಗಿ ಲಿಂಗೈಕ್ಯರಾದರು. ತನ್ನ ಮಡದಿಯನ್ನು ಕಳೆದುಕೊಂಡು ಅಲ್ಲಮ ಮರುಳನಂತೆ ಅಲೆಯುತ್ತಾ, ತಿರುಗುತ್ತಿರುವಾಗ ಒಂದು ಗುಹೆಯನ್ನು ಪ್ರವೇಶಿಸುತ್ತಾರೆ ಅಲ್ಲಿ ಒಬ್ಬ ಯೋಗಿ ಅನಿಮಿಷ ದೇವ ಗುರುವಿನ ಪರಿಚಯವಾಗುತ್ತೆ. ಅಲ್ಲಿ ಆ ಗುರು ಅಲ್ಲಮನಿಗೆ ಒಂದು ಲಿಂಗ ಕೊಟ್ಟು ತನ್ನ ಎಲ್ಲಾ ಜ್ಞಾನವನ್ನು ಧಾರೆಯೆರೆಯುತ್ತಾರೆ. ಆ ಗುಹೆಯಲ್ಲಿ ಅಲ್ಲಮ ಜ್ಞಾನೋದಯವಾಗಿ ಅಲ್ಲಮಪ್ರಭುವಾಗಿ ಬದಲಾಗುತ್ತಾರೆ.
ವಚನ ಸಾಹಿತ್ಯದ ಬೆಳವಣಿಗೆಯಲ್ಲಿ ಅಲ್ಲಮಪ್ರಭು ಪಾತ್ರ.
- ಅಲ್ಲಮಪ್ರಭುವಿನ ವಚನ ಭಾಷೆ ತುಂಬಾ ಕ್ಲಿಷ್ಟ ಹಾಗೂ ಸಂಕೀರ್ಣವಾದದ್ದು ಅಷ್ಟೇ ಅನುಭವ ಜನ್ಯ
- “ಮಾತೆಂಬುದು ಜ್ಯೋತಿರ್ಲಿಂಗ ಸ್ವರ ಎಂಬುದು ಪರತತ್ವ” ಎಂಬುದು ಮಾತಿನ ಮಹತ್ವದ ಪ್ರಕರತೆಯನ್ನು ಅವರು ತಿಳಿಸಿದ್ದಾರೆ.
- ಪ್ರಭುದೇವರ ವಚನಗಳಲ್ಲಿ ಅಲಂಕಾರ ಉಪಮಾನ ಒಗಟು ಗಾದೆ ರೂಪದ ನುಡಿ ಸಂಪತ್ತು ಉಜ್ವಲ ಹಾಗೂ ಪರಿಣಾಮಕಾರಿಯಾಗಿಸಿವೆ.
- ಬೆಡಗಿನ ವಚನಗಳಲ್ಲಿ ಅನುಭಾವದ ಅನುಭವದ ನಿರಾಕಾರವನ್ನು ನಿಲುಕುವಷ್ಟು ಈ ಮಾತಿನಲ್ಲಿ ಸಾಕಾರಗೊಳಿಸಿದ್ದಾರೆ.
- ಹೊನ್ನು ಮಾಯೆ ಎಂಬುವರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆ ಎಂಬುವರು ಹೆಣ್ಣು ಮಾಯೆಯಲ್ಲ ಎಂಬ ವಚನವು ಅನುಭವದ ತೀವ್ರತೆಯನ್ನು ಕಾಣಬಹುದು.
- ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ ಎಂಬ ವಚನದ ಕಾವ್ಯ ಸತ್ವದೊಡನೆ ತಿಳಿಸುವಂತದ್ದಾಗಿದೆ.
- ಪ್ರಣಿತೆಯೂ ಇದೆ ಬತ್ತಿಯೂ ಇದೆ ಜ್ಯೋತಿಯ ಬೆಳಗುವಡೆ ಎಂಬ ವಚನದಲ್ಲಿ ಭಕ್ತಿಯಲ್ಲಿ ಶಿಷ್ಯರ ಶ್ರೇಷ್ಠತೆಯನ್ನು ಹೇಳಿದ್ದಾರೆ.
- ಕೊಟ್ಟ ಕುದುರೆಯನ್ನೇರಲಾರದವನು ಮತ್ತೊಂದು ಕುದುರೆಯ ಬಯಸುವವರು ವೀರರು ಅಲ್ಲ ಧೀರರು ಅಲ್ಲ ಎಂಬ ವಚನದಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ವಿಳಂಬಿಸಿದ್ದಾನೆ.
- ಕಾಲುಗಳೆಂಬವು ಗಾಲಿ ಕಂಡಯ್ಯ ಎಂಬ ವಚನದಲ್ಲಿ ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ.