History and Geography 2026: ಇತಿಹಾಸ ಮತ್ತು ಭೂಗೋಳ ಕಾಲ ಮತ್ತು ಸ್ಥಳದ ಆಯಾಮಗಳು ಪರಿಕಲ್ಪನೆ ಮತ್ತು ಅದರ ಸಹಸಂಬಂಧ.
History and Geography 2026: ಸಮಾಜದ ಅವಿಭಾಜ್ಯ ಅಂಗ ಮಾನವನಾಗಿದ್ದಾನೆ. ಸಮಾಜ ಮತ್ತು ಮಾನವನ ಮಧ್ಯ ಅನ್ನೋನ್ಯ ಕ್ರಿಯೆಗಳು ನಿರಂತರ ಮತ್ತು ಅವಿಚ್ಛಿನ್ನ, ಆದ ಪ್ರಯುಕ್ತ ಮಾನವ ಮತ್ತು ಸಮಾಜ ಪರಿಸರವನ್ನು ಕುರಿತಂತೆ ನಮ್ಮ ಶಾಲಾ ವಿಷಯಗಳ ಬೋಧನೆಯಲ್ಲಿ ಈ ಅಂಶಗಳನ್ನು ಅತ್ಯಾಗತ್ಯವಾಗಿ ಅಳವಡಿಕೆ ಮಾಡಿಕೊಳ್ಳಬೇಕಾಗಿದೆ. ಅಂದರೆ, ಇದು ನೇರವಾಗಿ ಸಮಾಜದ ಪರಿಸರ ಮತ್ತು ಮಾನವನನ್ನು ಕುರಿತು ತಿಳಿಯುವ ವಿಷಯವಾಗಿದೆ.
ಬದಲಾವಣೆ ಪ್ರಕೃತಿ ನಿಯಮವಾಗಿದೆ. ಬದಲಾವನೆಯಲ್ಲಿ ಹಳೆಯದು ಹೋಗಿ ಹೊಸದಕ್ಕೆ ಮಹತ್ವ ಬರುವುದು. ಈ ಬದಲಾಗುತ್ತಿರುವ ಸಮಾಜ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ನಾಡಿನ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಸಮಾಜ ವಿಜ್ಞಾನದ ಮೇಲೆ ಅವಲಂಬಿಸಿದೆ. ಜೀವನದ ನವನವೀಯತೆಗೆ ಹೊಸ ಅರ್ಥವನ್ನು ಕಲ್ಪಿಸಲು ಸಮಾಜವಿಜ್ಞಾನ ಅವಕಾಶ ಮಾಡಿಕೊಡುವ ಮೂಲಕ ಮಾನವ ತನ್ನ ವಿಕಾಸವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ.
ಸಮಾಜವಿಜ್ಞಾನ ವಸ್ತು ವಿಷಯದ ಮೂಲಕ ಪ್ರಜಾಪ್ರಭುತ್ವದ ನೀತಿ, ನಿಯಮ, ಹಕ್ಕು ಮತ್ತು ಕರ್ತವ್ಯಗಳ ಹಿನ್ನೆಲೆಯಲ್ಲಿ ಸಂಕುಚಿತ ರಾಜನಿಷ್ಠೆ ತೊರೆದು ವಿಶಾಲ ಭಾವನೆ ಬೆಳೆಸುವ ಗುರಿಯನ್ನು ಹೊಂದಿರುತ್ತದೆ.
ಅಂದರೆ ಇದು ಸಮಾಜದ ಪರಿಸರ ಮತ್ತು ಮಾನವನನ್ನು ಕುರಿತು ತಿಳಿಯುವ ವಿಷಯವಾಗಿದೆ. ಈ ರೀತಿಯಾಗಿ ಸಮಾಜ ಮತ್ತು ಮಾನವನ ಎಲ್ಲಾ ರೀತಿಯ ನೂತನ ಮಾಹಿತಿಗಳನ್ನು ಸಮಗ್ರಕರಿಸುವ ಶಿಕ್ಷಣ ತಜ್ಞರು ಇದನ್ನು ಸಮಾಜವಿಜ್ಞಾನ ಎಂದು ಕರೆದರು.
ಸಮಾಜ ವಿಜ್ಞಾನ ತನ್ನದೇಯಾದ ವಿಕಾಸ ಹೊಂದಿದೆ. ಅದರಲ್ಲಿ ಅಡಕವಾಗಿರುವ ಇತಿಹಾಸ, ಪೌರನೀತಿ, ಭೂಗೋಳ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ಮುಂತಾದವುಗಳು ವಿಸ್ತ್ರತವಾಗಿ ಬೆಳೆದು ಪ್ರತ್ಯೇಕ ಶಾಖೆಗಳಾಗಿರುತ್ತದೆ. ಅವುಗಳ ಬಗ್ಗೆ ಈ ಕೆಳಗಿನಂತೆ ವಿವರವಾಗಿ ತಿಳಿಯಲು ಯತ್ನಿಸುವುದು ಅಗತ್ಯವಾಗಿರುತ್ತದೆ.
ಮಾನವ ಮತ್ತು ಸಮಾಜವಿಜ್ಞಾನ ವಿಕಾಸ ಕುರಿತಂತೆ ನಮ್ಮ ಶಾಲಾ ವಿಷಯಗಳ ಬೋಧನೆಯಲ್ಲಿ ಸಮಾಜಿಕ ಅಂಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಈ ರೀತಿಯಾಗಿ ಸಮಾಜ ಮತ್ತು ಮಾನವನ ಎಲ್ಲ ರೀತಿಯ ನೂತನ ಮಾಹಿತಿಗಳನ್ನು ಸಮಗ್ರಕರಿಸುವುದರಿಂದ ಇದನ್ನು ಸಮಾಜ ವಿಜ್ಞಾನದ ವಿಕಾಸವೆಂದು ಕರೆದಿರುವರು.
ಸಮಾಜ ವಿಜ್ಞಾನವು ಮಾನವರು ಅವರು ವಾಸಿಸುವ ಈ ಸಮಾಜದ ಪರಿಸರದ ಅಂತರಸಂಬಂಧ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಮೂಲಕ ಮಾನವಿಕ ವಿಷಯಗಳ ತಿರುಳನ್ನು ತಿಳಿಸುವಂತಹ ಕಾರ್ಯವನ್ನು ಮಾಡುವುದು, ಅಲ್ಲದೇ ವರ್ತಮಾನ ಹಾಗೂ ಸಮಕಾಲೀನ ಸಮಸ್ಯೆಗಳನ್ನು ಒಳಗೊಂಡಂತೆ ತಿಳಿಸುವ ಕಾರ್ಯವನ್ನು ಮಾಡುವುದು.
ಇತಿಹಾಸ ಮತ್ತು ಭೂಗೋಳ : ಕಾಲ ಮತ್ತು ಸ್ಥಳದ ಆಯಾಮಗಳು ಪರಿಕಲ್ಪನೆ & ಅದರ ಸಹ ಸಂಬಂಧ (History and Geography – Temporal & Spa-tial, Dimensions, Concept & their Interrelationship)
ಸಮಾಜವಿಜ್ಞಾನ ಸಮಗ್ರವಾದ ವಸ್ತು ವಿಷಯವನ್ನು ಹೊಂದಿದ್ದು ಇದರ ಅಧ್ಯಯನ ಎಲ್ಲರಿಗೂ ಅಗತ್ಯವಾಗಿರುತ್ತದೆ. ಇದರಲ್ಲಿ ಇತಿಹಾಸ ಮತ್ತು ಭೂಗೋಳಗಳು ಪ್ರಮುಖವಾಗಿರುತ್ತದೆ.
ಇತಿಹಾಸವನ್ನು ಸಮಾಜ ವಿಜ್ಞಾನಗಳ ರಾಣಿ ಅಥವಾ ಮಾತೆ ಎಂದು ಕರೆಯುವರು.
ಇದು ಎಲ್ಲ ವಿಷಯಗಳ ಅಧ್ಯಯನಗಳ ನೆಲೆಯಾಗಿದೆ. ಇತಿಹಾಸವು ಅಪೂರ್ವವಾದ ಹಿನ್ನೆಲೆಯನ್ನು ಹೊಂದಿದ್ದು ಕ್ರಿ.ಪೂ 5ನೇ ಶತಮಾನದಲ್ಲಿ ಹೆರೋಡೆಟಸ್ನಿಂದ ರಚಿತ ವಾಯಿತು ಎಂಬ ಪ್ರತೀತವಿದೆ. ಆದರೆ ಮಾನವನ ಹುಟ್ಟು ವಿಕಾಸವನ್ನು ಅಧ್ಯಯನ ಮಾಡಿದಾಗ ಈತನಿಗಿಂತಲೂ ಮೊದಲು ಮಾನವ ಇತಿಹಾಸ ಇದ್ದಿರಬಹುದೆಂಬ ಊಹೆಯಿದೆ.
ಹೆರೋಡೆಟಸನು ವಿವಿಧ ಪ್ರದೇಶಗಳ ಭೆಟ್ಟಿ ನೀಡುವುದರೊಂದಿಗೆ ಅಲ್ಲಿನ ಸಂಸ್ಕೃತಿ ಸತ್ಯವೆನಿಸಿದ ಘಟನೆಗಳನ್ನು ಸಂಗ್ರಹಿಸಿದ ಈ ಸಂಗ್ರಹಕ್ಕೆ ಹಿಸ್ಟೇರಿಯಾ ಎಂದು ಕರೆದನು. ಮುಂದೆ ಅದೇ ಹಿಸ್ಟೋರಿಯಸ್ ಆಗಿ ಅದು ಹಿಸ್ಟರಿ ಆಗಿ ಪರಿವರ್ತನೆ ಹೊಂದಿದೆ. ಗತಕಾಲದ ಮಾಹಿತಿಗಳ ಸಂಗ್ರಹದ ಮೂಲಕ ಹಿರೋಡೋಟಸನು ಇತಿಹಾಸದ ಪಿತಾಮಹನಾಗಿದ್ದಾನೆ.
ಇತಿಹಾಸವು ಮಾನವನ ಜೀವನದ ಪ್ರಗತಿಯನ್ನು ವಿವರಿಸುವ ವಿಷಯವಾಗಿದೆ. ಪ್ರತಿಯೊಬ್ಬರೂ ಇದರ ಜ್ಞಾನವನ್ನು ಅತ್ಯವಶ್ಯಕವಾಗಿ ಪಡೆಯಬಹುದಾಗಿದೆ. ಇಂದು ಇತಿಹಾಸ ಬೃಹತ್ ವಿಶ್ವಕೋಶದಂತಿರುವುದರಿಂದ ಅದು ಜ್ಞಾನಾರ್ಜನೆಗೆ ಅತ್ಯಂತ ಉಪಯುಕ್ತ ವಿಷಯವಾಗಿದೆ.
ಇತಿಹಾಸದ ಪರಿಕಲ್ಪನೆ : (Concept of History)
ಇಂಗ್ಲೀಷ್ ಭಾಷೆಯ History ಎಂಬ ಪದವು ಗ್ರೀಕ್ ಮೂಲದ Historia ಎಂಬ ಪದದಿಂದ ಉತ್ಪನ್ನವಾಗಿದೆ. Historia ಎಂದರೆ ವಿಚಾರಿಸುವುದು/ಅನ್ವೇಷಣೆ ಮಾಡುವುದು/ ಪ್ರಶ್ನಿಸುವುದು ಅಥವಾ ವಿಮರ್ಶಾತ್ಮಕವಾಗಿ ಸಂಗ್ರಹಿಸಿದ ಸಂಗತಿ ಎಂದು ಅರ್ಥವಾಗುವುದು.
ಇತಿಹಾಸ ಎಂಬ ಪದ ಸಂಸ್ಕೃತ ಮೂಲದಿಂದ ಬಳಕೆಗೆ ಬಂದಿದೆ. ಇತಿಹಾಸ ಎಂಬ ಪದವನ್ನು ವಿಶ್ಲೇಷಿಸಿದರೆ ಇತಿ+ಹ+ಅಸ=ಇತಿಹಾಸವೆಂದಾಗುತ್ತದೆ. ಇದರ ಅರ್ಥ ಈ ರೀತಿ ಇತ್ತು /ಹೀಗೆ ಆಯಿತು/ ಹೀಗೆ ನಡೆಯಿತಂತೆ ಎಂದಾಗುವುದು.
ಇತಿಹಾಸದ ಅರ್ಥ:(Meaning of History)
ಇತಿಹಾಸ ಅಂದರೇನು? ಈ ಪ್ರಶ್ನೆಗೆ ಸರ್ವಸಮ್ಮತ ಉತ್ತರ ಕಷ್ಟಸಾಧ್ಯ. ಇದಕ್ಕೆ ಕಾರಣ ಇತಿಹಾಸ ತಜ್ಞರಲ್ಲಿ ಅದರ ಲಕ್ಷಣ, ವ್ಯಾಪ್ತಿ, ಹಾಗೂ ಮೌಲ್ಯಗಳ ಬಗ್ಗೆ ಭಿನ್ನಾಭಿಪ್ರಾಯಗಳೇ ಮುಖ್ಯವಾಗಿರುತ್ತದೆ.
- ನಡೆದು ಹೋದ ಘಟನೆಗಳನ್ನು ಜೀವನದ ಸ್ಥಿತಿಗತಿಗಳನ್ನು ತಿಳಿಸುವ ವಿಷಯವೇ ಇತಿಹಾಸ.
- ನಮ್ಮ ಗತಕಾಲದ ಘಟನೆಗಳ ಕಥಾರೂಪವೇ ಇತಿಹಾಸ.
- ನಮ್ಮ ನಾಗರೀಕತೆ & ಸಂಸ್ಕೃತೀಯ ಜೀವನವನ್ನು ಅಭ್ಯಾಸಿಸುವುದೇ ಇತಿಹಾಸ.
- ಸಾವಿರಾರು ಚಳುವಳಿಗಳು, ಕ್ರಾಂತಿಗಳು, ಹೋರಾಟಗಳು, ಧೈರ್ಯ, ಶೌರ್ಯ ಸಾಹಸಗಳ ಬೆಳವಣಿಗೆಗಳ ಪ್ರಭಾವಕ್ಕೆ ಒಳಗಾಗಿರುವ ಹಾಗೂ ಕೂಡಿರುವ ಒಂದು ದೊಡ್ಡ ದಾಖಲೆಯೇ ಇತಿಹಾಸ.
- ಮಾನವನ ಜೀವನದ ಎಲ್ಲಾ ಆಯಾಮಗಳನ್ನು ಕುರಿತು ಅಧ್ಯಯನ ಮಾಡು ವುದೇ ಇತಿಹಾಸ.
ಇತಿಹಾಸದ ವ್ಯಾಖ್ಯೆಗಳು (Difinitions of History)
ಇತಿಹಾಸಕ್ಕೆ ಸಮಂಜಸವಾದ ವ್ಯಾಖ್ಯೆ ನೀಡುವುದು ಕಷ್ಟಕರವಾದ ಕಾರ್ಯವಾಗಿದೆ. ಆದರೂ ಸಹ ನಮ್ಮ ಸಾಮಾನ್ಯ ಬಳಕೆಗಾಗಿ ಇತಿಹಾಸಕ್ಕೆ ಸರಳ ವ್ಯಾಖ್ಯೆಗಳನ್ನು ನೀಡಬಹುದಾಗಿದೆ.
ಇತಿಹಾಸವು ಗತಕಾಲದ ಮುಖ್ಯ ಘಟನೆಗಳ ವರದಿ, ಮಾನವನ ಜೀವನದ ಸಂಗ್ರಾಮದ ಅರ್ಥಪೂರ್ಣ ಕಥೆ, ಅವನ ಜೀವನದಲ್ಲಿ ಏನು ನಡೆದವು? ಮತ್ತು ಏಕೆ ನಡೆದು ಎಂಬುದನ್ನು ತಿಳಿಸುವ ದಾಖಲೆಯೇ ಇತಿಹಾಸ.
- ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ.(ಹಿರೋಡೋಟಸ್)
- ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆಯೇ ಇತಿಹಾಸ,(ಸಂತೆ ಆಗಸ್ಟೈನ್)
- ಉಳ್ಳವರು ಮತ್ತು ಇಲ್ಲದವರು ನಡುವಿನ ಸಂಘರ್ಷವೇ ಇತಿಹಾಸ(ಕಾರ್ಲ್ಮಾರ್ಕ್ಸ್)
- ನಾಗರೀಕತೆಯ ಏಳು ಬೀಳಿನ ಕಥೆಯೇ ಇತಿಹಾಸ (ಆನಾರ್ಲ್ಡ್ ಟಾಯ್ಟ)
- ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ (ಜವಾಹರ್ಲಾಲ್ ನೆಹರು)
- ಬದಲಾಗದ ಗತಕಾಲದ ವಿವರಣೆಯೇ ಇತಿಹಾಸ (ಅರಿಸ್ಟಾಟಲ್)
- ನಾಗರೀಕತೆಗಳ ತುಲನಾತ್ಮಕ ಅಧ್ಯಯನವೇ ಇತಿಹಾಸ (ಸ್ಟೆಂಗ್ಲರ್)
- ಇರುವುದು ಒಂದೇ ಇತಿಹಾಸ, ಅದೇ ಮಾನವ ಇತಿಹಾಸ (ರವೀಂದ್ರನಾಥ್ ಠಾಗೂರ್)
- ಮಾನವ ಕುಲದ ಕಥೆಯೇ ಇತಿಹಾಸ (ಹೆನ್ರಿವಾನ್ಲೂನ್)
- ಇತಿಹಾಸ ಮತ್ತು ಘಟನೆಗಳ ಪರಸ್ಪರ ಅಂತರ್ಕ್ರಿಯೆ ಹಾಗೂ ವರ್ತಮಾನ, ಭೂತಕಾಲಗಳ ನಡುವೆ ನಡೆಯುವ ನಿರಂತರ ಸಂಭಾಷಣೆ
- ಅಗಣಿತ ಜೀವನ ಚರಿತ್ರೆಯ ಸಾರಸಂಗ್ರಹವೇ ಇತಿಹಾಸ (ಕಾರ್ಲೈಲ್)
- ಒಂದು ಯುಗದ ದಾಖಲೆಗಳನ್ನು ಇನ್ನೊಂದು ಯುಗಕ್ಕೆ ತಿಳಿಸುವುದೇ ಇತಿಹಾಸ (ಬುಕ್ ಹಾರ್ಡ್)
- ಭೂತಕಾಲದಲ್ಲಿನ ಅನುಭವ ಅಭಿನಯವೇ ಇತಿಹಾಸ (ಕಾಲಿಂಗ್ವುಡ್)
- ಅಸಂಖ್ಯಾತ ಜೀವನ ಚರಿತ್ರೆಗಳ ಸಾರಸಂಗ್ರಹವೇ ಇತಿಹಾಸ (ಫಾಮಸ್ ಕಾಲೈಲ್)
- ಸತ್ತವರ ಮೇಲೆ ಹೆಣೆಯಲ್ಪಟ್ಟ ಸುಳ್ಳಿನ ಕಂತೆಯೇ ಇತಿಹಾಸ (ನೆಪೋಲಿಯನ್)
ಈ ಮೇಲಿನ ವ್ಯಾಖ್ಯೆಗಳನ್ನು ಗಮನಿಸಿದರೆ ನಾವು ಇತಿಹಾಸ ಕುರಿತು ಸಮಂಜಸ ವ್ಯಾಖ್ಯೆ ನೀಡುವುದು ಕಷ್ಟ ಎನ್ನುವುದು ಈ ಮೇಲೆ ತಿಳಿಸಿದೆ. ಆದರೂ ಸಾಮಾನ್ಯ ಬಳಕೆಗಾಗಿ ಇತಿಹಾಸಕ್ಕೆ ಒಂದು ಸರಳ ವ್ಯಾಖ್ಯೆಯನ್ನು ನೀಡಬಹುದು. ಇತಿಹಾಸವು ಗತಕಾಲದ ಮುಖ್ಯ ಘಟನೆಗಳ ವರದಿ, ಮಾನವ ಜೀವನ ಸಂಗ್ರಾಮದ ಅರ್ಥಪೂರ್ಣ ಕಥೆ ಅವನ ಜೀವನದಲ್ಲಿ ಏನು ನಡೆದವು ಮತ್ತೆ ಏಕೆ ನಡೆದವು? ಎಂಬುದನ್ನು ತಿಳಿಸುವ ದಾಖಲೆಯೇ ಇತಿಹಾಸ.
ಇತಿಹಾಸದ ಸ್ವರೂಪ: (Nature of History)
ಇತಿಹಾಸದ ಕೇಂದ್ರಬಿಂದು ಮಾನವನಾಗಿದ್ದಾನೆ ರವೀಂದ್ರನಾಥಠಾಕೂರ ಅವರು ಹೇಳುವಂತೆ “ಇರುವುದು ಒಂದೇ ಇತಿಹಾಸ. ಅದೇ ಮಾನವ ಇತಿಹಾಸ, ಅಂದರೆ ಇತಿಹಾಸವು ಮಾನವನನ್ನು ಕೇಂದ್ರಬಿಂದುವನ್ನಾಗಿಸಿಕೊಂಡಿದೆ. ಅನಾದಿಕಾಲದಿಂದ ಇಂದಿನವರೆಗೆ ಇತಿಹಾಸವು ಮಾನವನು ಹೋಗಿರುವ ಮತ್ತು ಅವನು ವಾಸವಾಗಿರುವ ಸ್ಥಳಗಳನ್ನು ಅವನ ನೋವು, ನಲಿವು, ಸೋಲು, ಗೆಲವು ಇವುಗಳನ್ನು ಒಳಗೊಂಡಂತೆ ಅವನ ಸರ್ವತೋಮುಖ ಜೀವನ ಹೇಗೆ ಸಾಗಿಬಂದಿದೆ ಎಂದು ಅಭ್ಯಾಸಿಸುತ್ತದೆ.
ಹಾಗೇ ಆದರ್ಶ ಪುರುಷರ ಜೀವನ ಚರಿತ್ರೆಗಳನ್ನು ಒಳಗೊಂಡಂತೆ ಅಂದಿನ ಸಮಾಜಕ್ಕೆ ಅವರು ಮಾಡಿದ ತ್ಯಾಗ ಮತ್ತು ಬಲಿದಾನಗಳ ಪರಿಚಯ ಮಾಡಿಕೊಡುವುದು.
ಈ ಕೆಳಗಿನ ಪ್ರಮುಖ ಅಂಶಗಳ ಮೂಲಕ ಇತಿಹಾಸದ ಸ್ವರೂಪವನ್ನು ತಿಳಿಯ ಬಹುದಾಗಿದೆ.
- ಇತಿಹಾಸವು ವಿವಿಧ ಕಾಲದ ಜನತೆಯನ್ನು ಕುರಿತು ಅಧ್ಯಯನ ಮಾಡುವದು
- ಕಾಲ ಕಲ್ಪನೆಯು ಇತಿಹಾಸದ ಪ್ರಮುಖ ಅಂಶವಾಗಿರುತ್ತದೆ.
- ಇದು ಗತಕಾಲದ ಘಟನೆಗಳನ್ನು ಕ್ರಮವಾಗಿ ಅಧ್ಯಯನ ಮಾಡುತ್ತದೆ.
- ಇತಿಹಾಸವು ಮನುಕುಲದ ಕಲೆಯಾಗಿರುತ್ತದೆ.
- ಇತಿಹಾಸವು ಗತಕಾಲದ ಘಟನೆಗಳು ವರ್ತಮಾನ ಕಾಲದ ಘಟನೆಗಳಿಗೆ ಅಡಿಪಾಯವಾಗಿರುವುದನ್ನು ವಿವರಿಸುತ್ತದೆ.
- ಇತಿಹಾಸವು ನಿರಂತರತೆ & ಸುಸಂಬದ್ಧತೆಯಿಂದ ಕೂಡಿರುತ್ತದೆ.
- ಇತಿಹಾಸ ವಿವಿಧ ಸ್ಥಳದ ಜನತೆಯನ್ನು ಭೌತಿಕ ಮತ್ತು ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿ ವ್ಯಕ್ತಿ ಮತ್ತು ಸಮಾಜದ ವಿಷಯಗಳನ್ನೊಳಗೊಂಡಂತೆ ಅಧ್ಯಯನ ಮಾಡುತ್ತದೆ.
- ಇತಿಹಾಸವು ಘಟನಾವಳಿಗಳ ಸಾರ ಸಂಗ್ರಹವಾಗಿದೆ.
- ಇತಿಹಾಸವು ಮಾನವನ ನೈತಿಕತೆಯ ಅಧ್ಯಯನವಾಗಿದೆ.
- ಇತಿಹಾಸವು ಪ್ರಾಚೀನಕಾಲದಿಂದಲೂ ಮಾನವ ಉಳಿಸಿ ಬೆಳೆಸಿಕೊಂಡು ಬಂದಿರುವ ಆದರ್ಶಗಳನ್ನು ಒಳಗೊಂಡಿದೆ.
- ಇತಿಹಾಸವು ಸಾಮಾಜಿಕ ಆರ್ಥಿಕ ವೈಜ್ಞಾನಿಕ ಮೊದಲಾದವುಗಳ ಪ್ರಗತಿಯ ಅಧ್ಯಯನವಾಗಿದೆ.
- ಇತಿಹಾಸವು ಕಾರಣ, ಪರಿಣಾಮ ಸಂಬಂದಗಳ ಅಧ್ಯಯನವಾಗಿದೆ.
- ಇತಿಹಾಸವು ಸೋಲು-ಗೆಲುವುಗಳ, ನೋವು ನಲಿವುಗಳ, ತ್ಯಾಗ ಬಲಿದಾನಗಳ ಮಹತ್ವಪೂರ್ಣ ಚಟುವಟಿಕೆಗಳ ಕುರುಹು ಆಗಿದೆ.
ಇತಿಹಾಸದ ವ್ಯಾಪ್ತಿ : (Scope of History)
ಯಾವುದೇ ಒಂದು ಶಾಸ್ತ್ರದ ವ್ಯಾಪ್ತಿ ಅಂದರೆ ಆ ವಿಷಯ ಹರವು, ವೈಶಾಲ್ಯ ಹಾಗೂ ಅಧ್ಯಯನದ ಮೇರೆಗಳನ್ನು ನಿರ್ಧರಿಸುವುದು.
ಇತಿಹಾಸವೂ ಕೂಡಾ ತನ್ನ ವೈಶಾಲ್ಯತೆಯನ್ನು ಹೊಂದಿದೆ. ಆದರೆ ಇಂತಿಷ್ಟೇ ಎಂದು ನಿರ್ಧರಿಸುವುದು ಕಷ್ಟಕರವಾಗಿಗೆ. ಆದರೆ ಇತಿಹಾಸದ ವಿಭಿನ್ನವಾದ ವ್ಯಾಖ್ಯೆಗಳನ್ನು ನೋಡಲಾಗಿ ಅದರ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಎಂಬುದು ಗೋಚರವಾಗುವುದು.
- ಇತಿಹಾಸವು ಸಮಾಜದಲ್ಲಿ ಬಾಳಿದ ಹಾಗೂ ಬಾಳುತ್ತಿರುವ ವ್ಯಕ್ತಿಗೆ ಸಂಬಂಧಿ ಸಿದ ಸಾಮಾಜಿಕ ರಾಜಕೀಯ, ಆರ್ಥಿಕ, ಬೌದ್ಧಿಕ ದಾರ್ಶನಿಕ ಸಂಸ್ಕೃತಿಕ ಅಂಶಗಳ ಅಧ್ಯಯನ ಮಾಡಬೇಕಾಗುವುದು.
- ಒಂದು ಪ್ರದೇಶದ ರಾಜರು ಅವರ ಪರಿವಾರ, ಅಧಿಕಾರ ಶಾಯಿ ಜೀವನ, ಜಾತಿ, ವರ್ಗ, ಕೌಟುಂಬಿಕ ಜೀವನ, ಸ್ತ್ರೀ ಸ್ಥಾನಮಾನ ಮುಂತಾದವುಗಳ ಅಧ್ಯಯನವಾಗಿರುತ್ತದೆ.
- ಸಮೂಹ ಜೀವನ, ನಗರ ಗ್ರಾಮ ಜೀವನ, ಸಂಪ್ರದಾಯ ರೀತಿ ನೀತಿಗಳು, ಕಲೆ, ನೀರಾವರಿ ವ್ಯವಸ್ಥೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ ಸಾಹಿತ್ಯ ಕೃತಿಗಳ ಅಧ್ಯಯನವಾಗಿರುತ್ತದೆ.
- ಇತಿಹಾಸ ಕೆಲವು ಮಾನವಿಕ ಶಾಸ್ತ್ರ ಅಂದರೆ ಮಾನವಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ ಮುಂತಾದ ವಿಷಯಗಳ ಸಂಬಂಧ ಹೊಂದಿದೆ.
- ವ್ಯಕ್ತಿಗೆ ಸಂಬಂಧಿಸಿದಂತೆ ನಿಸರ್ಗದ ಅಂಶಗಳು, ನದಿ, ಸರೋವರ, ಪರ್ವತ, ಶಿಖರಗಳು ಮುಂತಾದ ಭೌಗೋಳಿಕ ಅಂಶಗಳು ಇತಿಹಾಸದ ಮುಖ್ಯ ವಸ್ತುಗಳಾಗಿವೆ.
- ಇತಿಹಾಸವು ಮನುಷ್ಯನ ಅಧ್ಯಯನವಾಗಿದೆ. ಅದು ಅವರ ಕಾಲ ಹಾಗೂ ಸ್ಥಳದೊಂದಿಗೆ ಸಂಬಂದ ಹೊಂದಿದೆ.
- ಇತಿಹಾಸ ನಿಂತ ನೀರಲ್ಲ. ಅದು ಪ್ರವಾಹದಂತೆ ಚಲಿಸುತ್ತಲೇ ಇರುತ್ತದೆ.
- ಇತಿಹಾಸವು ಜನತೆ, ಸ್ಥಳ, ಕಾಲ ಹಾಗೂ ಅಭಿಪ್ರಾಯ ಎಂಬ ನಾಲ್ಕು ಆಯಾಮಗಳನ್ನು ಹೊಂದಿದೆ.
- ಇತಿಹಾಸವು ಸ್ಥಳೀಯ, ರಾಷ್ಟ್ರೀಯ ಜಾಗತಿಕ ಘಟನೆಗಳಿಗೆ ಹಾಗೂ ಸಮಸ್ಯೆ ಗಳಿಗೆ ಸೀಮಿತವಾಗಿರುತ್ತದೆ.
- ಸಮಗ್ರ ಸಮಾಜದ ಅಂಶಗಳು ಅಂದರೆ ಭೌಗೋಳಿಕ ಪರಿಸರ, ಭೂ ವ್ಯವಸ್ಥೆ ಆರ್ಥಿಕ ಸ್ಥಿತಿಗತಿ, ಕೈಗಾರಿಕೆ, ಸಮಾಜಿಕ ರಚನೆ, ಕಲಾತ್ಮಕ ಹಾಗೂ ಸಾಂಸ್ಕೃತಿಕ ಜೀವನ ಮುಂತಾದ ಎಲ್ಲ ಕ್ಷೇತ್ರವನ್ನು ಒಳಗೊಂಡಿದೆ.
- ಇತಿಹಾಸ ಕೇವಲ ದೊರೆಗಳು, ಅವರ ರಾಜ್ಯ ಭಾರ ಆಸ್ಥಾನದ ವ್ಯವಹಾರ, ಸಂತತಿ ಉದಯ, ರಾಜತಂತ್ರ ಯುದ್ಧಗಳಿಗೆ ಸೀಮಿತವಾಗುವುದರೊಂದಿಗೆ ಸಮಗ್ರತೆಯನ್ನು ಆದರಿಸಿರುತ್ತದೆ.
- ಇತಿಹಾಸವು ಲೋಕನೀತಿ, ರೂಢಿಪದ್ದತಿ, ಪುರಾಣ, ಪುಣ್ಯಕತೆ ಮುಂತಾದ ಅಂಶಗಳನ್ನು ಆಧರಿಸಿರುತ್ತದೆ.
- ಇತಿಹಾಸ ಮಾನವನ ವಿಕಸನ ಕಥೆ ಅಂದರೆ ಭೂಮಿಯ ಉಗಮ ಮಾನವನ ಉಗಮ, ಅವರ ಭಾಷೆ, ಪಶುಪಾಲನ ಕೃಷಿಯ ಆರಂಭ ಮುಂತಾದ ಅಂಶಗಳನ್ನು ಆಧರಿಸಿದೆ.
- ಇತಿಹಾಸ ಪ್ರಾಚೀನ ನಾಗರೀಕತೆ ಅಂದರೆ ಈಜಿಪ್ಟ್ ನಾಗರೀಕತೆ, ಮೆಸಪಟೋಮಿಯ, ಚೀನಾ ನಾಗರೀಕತೆಯ ಅಂಶಗಳನ್ನು ಹೊಂದಿದೆ.
- ಇತಿಹಾಸ ಗ್ರೀಕ್ & ರೋಮನ್ ಸಾಮ್ರಾಜ್ಯಗಳ ಸ್ಥಾಪನೆ ಹಾಗೂ ಕೊಡುಗೆಗಳ ವಿಷಯವನ್ನು ಹೊಂದಿದೆ.
- ಇತಿಹಾಸವು ಕ್ರೈಸ್ತ & ಇಸ್ಲಾಂ ಧರ್ಮಗಳ ಪರಿಚಯ, ಅವರ ಬೋಧನೆ ಮುಂತಾದ ಅಂಶಗಳನ್ನು ಹೊಂದಿರುತ್ತದೆ.
- ಇತಿಹಾಸವು ಕೈಗಾರಿಕಾ ಕ್ರಾಂತಿ, ಸ್ವಾತಂತ್ರ್ಯ ಸಂಗ್ರಾಮ, ಪ್ರಾನ್ಸ್ ಹಾಗೂ ರಶಿಯಾ ಕ್ರಾಂತಿ ವಿಷಯವನ್ನು ಒಳಗೊಂಡಿರುತ್ತದೆ.
- ಇತಿಹಾಸವು ಪ್ರಪಂಚದ ಯುದ್ಧಗಳು, ಸರ್ವಾಧಿಕಾರಿಗಳ ಏಳಿಗೆ, ವಿಶ್ವಸಂಸ್ಥೆ ಅಂಗಗಳು ಹಾಗೂ ಸಾಧನೆಗಳನ್ನು ಹೊಂದಿರುವುದು.
- ಇತಿಹಾಸವು ಸಮಕಾಲೀನ ಪ್ರಪಂಚಕ್ಕೆ ಸಂಬಂಧಿಸಿದಂತೆ ಶೀತಲ ಸಮರ, (USSR) ವಿಘಟನೆ, (CIS) ರಚನೆ ಅಲಿಪ್ತ ಚಳುವಳಿ ಹೇಗೆ ಇತಿಹಾಸ ತನ್ನ ವಿಸ್ತಾರವನ್ನು ಹೊಂದಿರುತ್ತದೆ.
ಇತಿಹಾಸದ ಪ್ರಾಮುಖ್ಯತೆ: (Importance of History)
ಅನಾದಿಕಾಲದಿಂದ ಇಂದಿನವರೆಗಿನ ಮಾನವ ಜನಾಂಗದ ಸಂಸ್ಕೃತಿಯ ಬೆಳವಣಿಗೆಯ ವಿವರಣೆಗಳನ್ನು ಇತಿಹಾಸದ ಅಧ್ಯಯನ ನೀಡುತ್ತದೆ, ಇತಿಹಾಸವು ವಿವಿಧ ಜನರ ಅನುಭವಗಳ ಸಾಗರವನ್ನು ಪ್ರಸ್ತುತಪಡಿಸುತ್ತದೆ. ಹೀಗಾಗಿ ಇತಿಹಾಸದ ಅಧ್ಯಯನವು ಮಾನವನಿಗೆ ವಿವಿಧ ರೀತಿಯಲ್ಲಿ ಉಪಯೋಗಕಾರಿಯಾಗಿದೆ.
- ಇತಿಹಾಸವು ಗತಕಾಲದ ಘಟನೆಗಳ ಸ್ಮರಣೆ ಮಾಡಿಕೊಡುವುದು.
- ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುವುದು.
- ಇತಿಹಾಸವು ಸ್ಫೂರ್ತಿಗೆ ಅವಕಾಶ ಮಾಡಿ ಕೊಡುವುದು.
- ಇತಿಹಾಸವು ನಮ್ಮ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಧರ್ಮ ಮುಂತಾದವುಗಳ ಕುರಿತು ದೇಶಾಭಿಮಾನವನ್ನು ಮೂಡಿಸುವುದು.
- ಇತಿಹಾಸವು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಧರ್ಮಶಾಸ್ತ್ರ, ತತ್ವಶಾಸ್ತ್ರ, ಭೂಗೋಳ ಶಾಸ್ತ್ರ ಮುಂತಾದವುಗಳಿಗೆ ಬೇಕಾದ ಐತಿಹಾಸಿಕ ಮಾಹಿತಿಯನ್ನು ಒದಗಿಸು ವುದು. ಆದ್ದರಿಂದ ಇತಿಹಾಸ ಎಲ್ಲ ಸಮಾಜ ವಿಜ್ಞಾನಗಳ ಬೇರು.
- ಇತಿಹಾಸವು ಉದಾತ್ತ ಧೈಯಗಳನ್ನು ಬೆಳೆಸುತ್ತದೆ ಹಾಗೂ ಸನ್ಮಾರ್ಗಕ್ಕೆ ದಾರಿ ತೋರಿಸುತ್ತದೆ.
- ಇತಿಹಾಸವು ವಿಶ್ವಶಾಂತಿಯನ್ನು ಬೆಳೆಸುತ್ತದೆ.
- ಇತಿಹಾಸವು ವೃತ್ತಿಪರ ಉಪಯೋಗವನ್ನು ಹೊಂದಿದೆ.
- ಇತಿಹಾಸವು ಜಾತಿಪಂಥ ವರ್ಣ, ವರ್ಗ, ಭಾಷೆ ಮುಂತಾದವುಗಳಿಗೆ ಸಂಬಂಧಪಟ್ಟ ಪೂರ್ವಾಗ್ರಹಗಳನ್ನು ಹೋಗಲಾಡಿಸುತ್ತದೆ.
- ಇತಿಹಾಸದ ಅಧ್ಯಯನವು ನಮಗೆ ವಿವಿಧ ದೇಶಗಳ ಜನರು ಸಂಪ್ರದಾಯ ಸಂಸ್ಕೃತಿ ಮತ್ತು ನಾಗರೀಕತೆಗಳ ಬಗ್ಗೆ ಜ್ಞಾನ ಸಂಪಾದಿಸಲು ಸಹಾಯ ಮಾಡುತ್ತದೆ.
- ಇತಿಹಾಸವು ವ್ಯವಹಾರಿಕ ಮೌಲ್ಯಗಳನ್ನು ಬೆಳೆಸುತ್ತದೆ.
- ಇತಿಹಾಸವು ಮಾನವನ ಜೀವನ ಕ್ರಮ, ಪ್ರವೃತ್ತಿ & ಉದಾತ್ತ ಧೈಯಗಳ ಬಗ್ಗೆ ಅರಿವು ಮೂಡಿಸುತ್ತದೆ.
- ಇತಿಹಾಸವು ಮಾನವನನ್ನು ಸುಸಂಸ್ಕೃತನನ್ನಾಗಿಸುತ್ತದೆ.
- ಇತಿಹಾಸದ ಅಧ್ಯಯನವು ಮಾನವರಲ್ಲಿ ನೈತಿಕತೆಯನ್ನು ಬೆಳೆಸುತ್ತದೆ.
- ಇತಿಹಾಸವು ಸಹಬಾಳ್ವೆಯ ಸಾಧನವಾಗಿದೆ.
- ಇತಿಹಾಸವು ಸಾಮಾಜಕ ಪ್ರಜ್ಞೆಯೊಂದಿಗೆ ರಾಷ್ಟ್ರ ಭಕ್ತಿಯನ್ನು ಬೆಳೆಸಿ ಪೋಷಿಸುತ್ತದೆ.
- ಇತಿಹಾಸವು ವರ್ತಮಾನವನ್ನು ವಿವರಿಸುವ ಮೂಲಕ ಜನತೆಯಲ್ಲಿ ಭವಿಷತ್ತಿನ ಬಗ್ಗೆ ಬೆಳಕು ನೀಡುವ ಕಾರ್ಯವನ್ನು ಮಾಡುತ್ತದೆ.
- ಇತಿಹಾಸ ಓದುಗರಿಗೆ ಗತಕಾಲದ ದಿವ್ಯದರ್ಶನದ ಮೂಲಕ ಮಹಾನ್ ವ್ಯಕ್ತಿಗಳ ಸಾಹಸ, ಯುದ್ಧ ವಿರೋಚಿತ ಕಾರ್ಯಗಳ ಮೂಲಕ ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ.